ಕರ್ನಾಟಕ

karnataka

ETV Bharat / state

ಸಮಸ್ಯೆ ಅರಿಯಲು ಕಚೇರಿ ಗೇಟ್​ ಬಳಿ ಕುಳಿತು ಕಾರ್ಯ ನಿರ್ವಹಿಸಿದ ತಹಶೀಲ್ದಾರ್​

ತಹಶೀಲ್ದಾರ್ ಕಚೇರಿ ಬಳಿ ನಿರ್ಮಿಸಲಾಗಿರುವ ಪಾರ್ಕ್​ನಿಂದಾಗಿ ಉಂಟಾಗುತ್ತಿರುವ ಸಮಸ್ಯೆ ತಿಳಿಯಲು ಬಂಗಾರಪೇಟೆ ತಹಶೀಲ್ದಾರ್​ ದಯಾನಂದ್​ ಗೇಟ್​ ಬಳಿಯೇ ಕುಳಿತು ಕಾರ್ಯನಿರ್ವಹಿಸಿದರು.

tahsildar-sat-near-the-gate-of-the-office-to-understand-the-problem
ಸಮಸ್ಯೆ ಅರಿಯಲು ಕಚೇರಿ ಗೇಟ್​ ಬಳಿ ಕುಳಿತು ಕಾರ್ಯ ನಿರ್ವಹಿಸಿದ ತಹಶೀಲ್ದಾರ್​

By

Published : Oct 10, 2022, 6:51 PM IST

ಕೋಲಾರ: ಇಲ್ಲಿನ ತಾಲೂಕು ಕಚೇರಿ ಗೇಟ್ ಬಳಿಯೇ ಕುಳಿತು ತಹಸೀಲ್ದಾರ್ ಕೆಲಸ ಮಾಡಿರುವ ವಿಚಿತ್ರ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಕಂಡುಬಂದಿದೆ. ತಹಸೀಲ್ದಾರ್ ದಯಾನಂದ್ ಅವರು ಗೇಟ್ ಬಳಿ ಕುಳಿತು ಕೆಲಸ ನಿರ್ವಹಿಸಿದರು.

ಇತ್ತೀಚೆಗೆ ಬಂಗಾರಪೇಟೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಂದುಕೊರತೆಗಳ ಸಭೆಯನ್ನು ನಡೆಸಲಾಗಿತ್ತು. ಸಭೆಯಲ್ಲಿ ಶಾಸಕ ನಾರಾಯಣಸ್ವಾಮಿ ಅವರು, ತಹಸೀಲ್ದಾರ್ ಕಚೇರಿಯ ಮುಂಭಾಗ ಅವೈಜ್ಞಾನಿಕವಾಗಿ ಪಾರ್ಕ್ ನಿರ್ಮಾಣ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವ ಪರಿಣಾಮ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದರು.

ಸಮಸ್ಯೆ ಅರಿಯಲು ಕಚೇರಿ ಗೇಟ್​ ಬಳಿ ಕುಳಿತು ಕಾರ್ಯ ನಿರ್ವಹಿಸಿದ ತಹಶೀಲ್ದಾರ್​

ಈ ಹಿನ್ನೆಲೆ ಇಂದು ತಹಸೀಲ್ದಾರ್ ದಯಾನಂದ ಅವರು ಗೇಟ್ ಬಳಿಯೇ ಕುಳಿತು,ಪಾರ್ಕ್​, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಮತ್ತು ಅಪಘಾತಗಳ ಬಗ್ಗೆ ತಿಳಿಯಲು ಸ್ವತಃ ಕಚೇರಿ ಗೇಟ್​​ ಬಳಿ ಕುಳಿತು ಕಾರ್ಯನಿರ್ವಹಿಸಿದರು. ಒಂದು ವೇಳೆ, ಈ ಪಾರ್ಕಿನಿಂದಾಗಿ ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ, ಜೆಸಿಬಿ ಮೂಲಕ ತೆರವು ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ :ಮುಸ್ಲಿಮರ 2ಬಿ ಮೀಸಲಾತಿ ತೆಗೆದುಹಾಕಬೇಕು : ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಗ್ರಹ

ABOUT THE AUTHOR

...view details