ಕರ್ನಾಟಕ

karnataka

ETV Bharat / state

ಬಸ್ ಡೋರ್, ಮೇಲ್ಭಾಗದಲ್ಲಿ ಕುಳಿತು ಅಪಾಯಕಾರಿ ಪ್ರಯಾಣ: ವಿಡಿಯೋ - students and villagers deadly travel on bus Footboard at Kolar

ಬಂಗಾರಪೇಟೆಯಿಂದ ಕಾಮಸಮುದ್ರ ಕಡೆಗೆ ತೆರಳುವ ಖಾಸಗಿ ಬಸ್​​ಗಳ ಟಾಪ್ ಸೇರಿದಂತೆ ಹಿಂಬದಿಯ ಮೆಟ್ಟಿಲುಗಳ ಮೇಲೆ ನೇತಾಡಿಕೊಂಡೆ ಜನರು ಅಪಾಯಕಾರಿ ಪ್ರಯಾಣ ಮಾಡುತ್ತಿದ್ದಾರೆ.

students and villagers deadly travel on bus  Footboard at Kolar
ಬಸ್ ಮೇಲ್ಬಾದಲ್ಲಿ ಕುಳಿತು ಡೆಡ್ಲಿ ಪ್ರಯಾಣ

By

Published : Mar 28, 2022, 2:31 PM IST

Updated : Mar 28, 2022, 2:38 PM IST

ಕೋಲಾರ: ಅಪಾಯಕ್ಕೆ ಆಹ್ವಾನ ನೀಡುವಂತೆ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಬಸ್ ಡೋರ್, ಹಿಂಬದಿಯ ಮೆಟ್ಟಿಲು ಹಾಗೂ ಬಸ್ ಮೇಲ್ಭಾಗದಲ್ಲಿ ಕುಳಿತು ಡೆಡ್ಲಿ ಪ್ರಯಾಣ ಮಾಡುತ್ತಿದ್ದಾರೆ. ಕೋಲಾರದ ಶ್ರೀನಿವಾಸಪುರ ತಾಲೂಕು ಹಾಗೂ ಬಂಗಾರಪೇಟೆ ತಾಲೂಕಿನ ಹಲವು ಖಾಸಗಿ ಬಸ್‌ಗಳಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು ಸವಾರಿ ಮಾಡುತ್ತಿರುವ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ.


ಆಂಧ್ರಪ್ರದೇಶದ ಪುಂಗನೂರಿನಿಂದ ನಿತ್ಯ ಶ್ರೀನಿವಾಸಪುರ ಪಟ್ಟಣಕ್ಕೆ ಆಗಮಿಸುವ ಖಾಸಗಿ ಬಸ್‌ಗಳಲ್ಲಿ ವಿದ್ಯಾರ್ಥಿಗಳ ಡೆಡ್ಲಿ ಸವಾರಿ ನಿಜಕ್ಕೂ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಬಂಗಾರಪೇಟೆಯಿಂದ ಕಾಮಸಮುದ್ರ ಕಡೆಗೆ ತೆರಳುವ ಬಸ್‌ಗಳಲ್ಲಿ ಖಾಸಗಿ ಬಸ್‌ನ ಟಾಪ್ ಸೇರಿದಂತೆ ಹಿಂಬದಿಯ ಮೆಟ್ಟಿಲುಗಳ ಮೇಲೆ ನೇತಾಡಿಕೊಂಡೇ ಜನರು ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಖಾಸಗಿ ಬಸ್‌ಗಳು ಮಾತ್ರವಲ್ಲದೇ ಕಾಲೇಜಿಗೆ ತೆರಳಲು ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ ಸೇವೆ ಇಲ್ಲದಿರುವುದರಿಂದ ಸಾರಿಗೆ ಬಸ್​​ಗಳಲ್ಲಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಇದನ್ನೂ ಓದಿ:ಪಾವಗಡ ಅಪಘಾತ : ಬಸ್​ನ ಮೇಲಿದ್ದರು 40ಕ್ಕೂ ಹೆಚ್ಚು ಮಂದಿ!

Last Updated : Mar 28, 2022, 2:38 PM IST

ABOUT THE AUTHOR

...view details