ಕರ್ನಾಟಕ

karnataka

ETV Bharat / state

ಕೋಲಾರದಲ್ಲಿ ದಕ್ಷ ಅಧಿಕಾರಿ ದಿ. ಡಿ.ಕೆ. ರವಿ ಅವರ ಕನಸಿನ ಯೋಜನೆ ಮತ್ತೆ ಜಾರಿ - kannadanews

ಕೋಲಾರ ಜಿಲ್ಲೆಯಲ್ಲಿ ಜನರ ಅನುಕೂಲಕ್ಕಾಗಿ ಕಂದಾಯ ಅದಾಲತ್ ಅನ್ನು ಜಾರಿಗೊಳಿಸಲಾಗಿದ್ದು,ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದನೆ ದೊರೆಯುತ್ತಿದೆ.

ರೈತರಿಗೆ ವರದಾನವಾಗಿರುವ ಕಂದಾಯ ಅದಾಲತ್ ಮತ್ತೆ ಆಯೋಜನೆ

By

Published : Jun 25, 2019, 9:22 PM IST

ಕೋಲಾರ:ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿಯವರ ಕನಸಿನ ಯೋಜನೆ ಕಂದಾಯ ಅದಾಲತ್ ಅನ್ನು ಕೋಲಾರ ಜಿಲ್ಲೆಯಲ್ಲಿ ಮತ್ತೆ ಜಾರಿಗೆ ತರಲಾಗಿದೆ.

ಈ ಯೋಜನೆ ಮೂಲಕವೇ ಡಿ.ಕೆ.ರವಿ ಕೋಲಾರ ಜಿಲ್ಲೆಯ ಜನರ ಮನೆ ಮಾತಾಗಿ ಜನಮನ ಗೆದ್ದಿದ್ರು, ಅಲ್ಲದೆ ಈ ಮಾದರಿ ಯೋಜನೆ ಸರ್ಕಾರದ ಗಮನ ಸೆಳೆದು ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿತ್ತು. ಆದರೆ ಡಿ.ಕೆ ರವಿಯವರ ನಂತರ ಯೋಜನೆ ಸ್ಥಗಿತಗೊಂಡಿತ್ತು. ಈಗ ಮತ್ತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಂದಾಯ ಅದಾಲತ್​​ ಆರಂಭಿಸಿದ್ದಾರೆ. ಮೊದಲು ತಾಲೂಕು ಮಟ್ಟಗಳಲ್ಲಿ ಅದಾಲತ್​ ಮೂಲಕ ಪಿಂಚಣಿ ಹಾಗೂ ಕಂದಾಯ ಇಲಾಖೆಯ ಅರ್ಜಿಗಳನ್ನು ಸ್ವೀಕರಿಸಿ ಒಂದೇ ದಿನದಲ್ಲಿ ಇತ್ಯರ್ಥ ಮಾಡಲಾಗುತ್ತಿದೆ.

ರೈತರಿಗೆ ವರದಾನವಾಗಿರುವ ಕಂದಾಯ ಅದಾಲತ್ ಮತ್ತೆ ಆಯೋಜನೆ

ಈ ನಿಟ್ಟಿನಲ್ಲಿ ಇಂದು ಕೆಜಿಎಫ್​ ತಾಲೂಕು ಮಟ್ಟದಲ್ಲಿ ನೂರಾರು ಜನರಿಗೆ ಒಂದೇ ಸೂರಿನಡಿ ಸಮಸ್ಯೆಗಳನ್ನು ಅದಾಲತ್​ ಮೂಲಕ ಬಗೆಹರಿಸಲಾಯಿತು. ಈ ಅದಾಲತ್​ ನಲ್ಲಿ ಪ್ರಮುಖವಾಗಿ ಪಿಂಚಣಿ, ವಿಧವಾ ವೇತನ, ಅಂಗವಿಕಲ ವೇತನ, ವೃದ್ಧಾಪ್ಯ ವೇತನಗಳ​ ಅರ್ಜಿ ಕುರಿತ ಸಮಸ್ಯೆಗಳ ಪರಿಹಾರಕ್ಕೆ ಸ್ಥಳದಲ್ಲೇ ಆದೇಶ ಮಾಡಿದ್ರೆ, ಕಂದಾಯ ಇಲಾಖೆಯ ಪಾವತಿ ವಾರಸುದಾರಿಕೆ ಬದಲಾವಣೆ, ​ಪಹಣಿ ತಿದ್ದುಪಡಿ, ಕಾಲಂ ನಂಬರ್​-9, ಸೇರಿದಂತೆ ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗುತ್ತದೆ. ಇಂಥದೊಂದು ಯೋಜನೆ ಈಗ ಮತ್ತೆ ಜಿಲ್ಲೆಯಲ್ಲಿ ಆರಂಭವಾಗಿರೋದು ರೈತರಿಗೆ, ವೃದ್ಧರಿಗೆ ಹಾಗೂ ಬಡವರಿಗೆ ಸಂತಸ ತಂದಿದೆ.

ABOUT THE AUTHOR

...view details