ಕರ್ನಾಟಕ

karnataka

ETV Bharat / state

ಹಣಕ್ಕಾಗಿ ಜನರನ್ನು ಪೀಡಿಸುತ್ತಿದ್ದ ಆರೋಪ: PSI ಅಮಾನತು - kolar news

ಲಾಕ್ ಡೌನ್ ವೇಳೆ ಆಂಧ್ರ ಕರ್ನಾಟಕ ಗಡಿಯ ಚೆಕ್ ಪೋಸ್ಟ್ ನಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಜನರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆ ಪಿಎಸ್​ಐರನ್ನು ಅಮಾನತು ಮಾಡಲಾಗಿದೆ.

 PSI suspension for tormenting people for money
PSI suspension for tormenting people for money

By

Published : Jun 3, 2021, 4:16 PM IST

Updated : Jun 3, 2021, 6:28 PM IST

ಕೋಲಾರ: ಲಾಕ್​​ಡೌನ್ ವೇಳೆ ಹಣಕ್ಕಾಗಿ ಜನರಿಗೆ ಕಿರುಕುಳ ನೀಡುತ್ತಿದ್ದ ಆರೋಪದಡಿ ಕೋಲಾರದಲ್ಲಿ ಪಿಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಪೊಲೀಸ್ ಠಾಣೆಯ ಸಬ್ ಇನ್ಸ್​​ಪೆಕ್ಟರ್ ಆಗಿರುವ ನರಸಿಂಹಮೂರ್ತಿ ಎಂಬುವರನ್ನ ಅಮಾನತುಗೊಳಿಸಲಾಗಿದೆ.

ಲಾಕ್​ಡೌನ್ ಸಂದರ್ಭದಲ್ಲಿ ಹಣಕ್ಕಾಗಿ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಅವರ ಬೆಂಬಲಿಗರು ರಾಯಲ್ಪಾಡು ಪೊಲೀಸ್ ಠಾಣಾ ಮುಂದೆ ಪ್ರತಿಭಟನೆ ಮಾಡಿದರು. ಅಲ್ಲದೇ ಲಾಕ್​​ಡೌನ್ ವೇಳೆ ಆಂಧ್ರ ಕರ್ನಾಟಕ ಗಡಿಯ ಚೆಕ್ ಪೋಸ್ಟ್​​​​ನಲ್ಲಿ ಹಳ್ಳಿ ಜನಕ್ಕೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Last Updated : Jun 3, 2021, 6:28 PM IST

ABOUT THE AUTHOR

...view details