ಕೋಲಾರ:ಐಎಂಎ ಜ್ಯೂವೆಲ್ಲರ್ಸ್ ಮಾಲೀಕ ಮನ್ಸೂರ್ ಖಾನ್ ಹಾಗೂ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕೋಲಾರದಲ್ಲಿ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಲಾಯಿತು.
ಐಎಂಎ ಜ್ಯೂವೆಲ್ಲರ್ಸ್ ದೋಖಾ ಖಂಡಿಸಿ ಪ್ರತಿಭಟನೆ: ಪ್ರತಿಕೃತಿ ದಹನ - kannadanews
ಐಎಂಎ ಜ್ಯೂವೆಲ್ಲರ್ಸ್ ಮಾಲೀಕ ಮನ್ಸೂರ್ ಖಾನ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕೋಲಾರದಲ್ಲಿ ವಂಚಿತ ಜನರು ಪ್ರತಿಭಟನೆ ನಡೆಸಿದ್ದಾರೆ.
ನಗರದ ಮೆಕ್ಕೆ ವೃತ್ತದಲ್ಲಿ ಸರ್ಕಾರದ ಪ್ರತಿಕೃತಿ ದಹಿಸಿ ಪ್ರತಿಭಟನೆ ಮಾಡಿದ ಟಿಪ್ಪು ಸಕ್ಯೂಲರ್ ಸೇನೆ ಹಾಗೂ ರಾಜ್ಯ ರೈತ ಸಂಘದ ಕಾರ್ಯಕರ್ತರು, ಕೂಡಲೇ ಮನ್ಸೂರ್ ಬಂಧಿಸುವಂತೆ ಒತ್ತಾಯ ಮಾಡಿದ್ರು. ಕೋಲಾರದಲ್ಲೂ ಕೋಟ್ಯಂತರ ರೂ. ವಂಚನೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದ್ದು, ಅಲ್ಪಸಂಖ್ಯಾತರಿಗೆ ಹೆಚ್ಚಾಗಿ ಮೋಸ ಮಾಡಿದ್ರು ಸರ್ಕಾರದ ಸಚಿವರು ಮನ್ಸೂರ್ ಪರವಾಗಿದ್ದಾರೆ.
ಕೋಲಾರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಕೋಟ್ಯಂತರ ರೂ. ವಂಚನೆ ಮಾಡಿ ರಾಜ್ಯದಲ್ಲೆ ಅಲ್ಲೋಲ ಕಲ್ಲೋಲ ಸೃಷ್ಠಿಯಾಗಿದ್ರು ಕೂಡ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರಲ್ಲದೇ. ಐಎಂಎಗೆ ಬೆಂಬಲ ನೀಡಿರುವ ಸರ್ಕಾರ ಹಾಗೂ ಸಚಿವರ ವಿರುದ್ದ ಘೋಷಣೆಗಳನ್ನ ಕೂಗಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ಪ್ರತಿಕೃತಿಗೆ ಚಪ್ಪಲಿ ಸೇವೆ ಮಾಡುವ ಮೂಲಕ ಕೂಡಲೇ ಮನ್ಸೂರ್ ಖಾನ್ ಬಂಧಿಸಿ ಹೂಡಿಕೆದಾರರಿಗೆ ನ್ಯಾಯ ಕೊಡಿಸುವಂತೆ ಒತ್ತಾಯ ಮಾಡಿದ್ರು.