ಕರ್ನಾಟಕ

karnataka

ETV Bharat / state

ನಾರಾಯಣ ಗೌಡ ಬಂಧನಕ್ಕೆ ಖಂಡನೆ: ವಿವಿಧೆಡೆ ಕರವೇ ಪ್ರತಿಭಟನೆ

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಬಂಧನ ವಿರೋಧಿಸಿ ಕೋಲಾರ, ಬೆಳಗಾವಿ ಮತ್ತು ವಿಜಯಪುರದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕರವೇ ಕಾರ್ಯಕರ್ತರು ಪ್ರತಿಭಟನೆ
ಕರವೇ ಕಾರ್ಯಕರ್ತರು ಪ್ರತಿಭಟನೆ

By ETV Bharat Karnataka Team

Published : Dec 28, 2023, 10:44 PM IST

Updated : Dec 29, 2023, 10:22 AM IST

ಕರವೇ ಕಾರ್ಯಕರ್ತರು ಪ್ರತಿಭಟನೆ

ಕೋಲಾರ:ಕನ್ನಡ ಭಾಷೆಯ ನಾಮಫಲಕ ಹಾಕುವಂತೆ ಒತ್ತಾಯಿಸಿ ಬುಧವಾರ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕನ್ನಡಪರ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರನ್ನೂ ಬಂಧಿಸಲಾಗಿದೆ. ನಾರಾಯಣ ಗೌಡ ಮತ್ತು ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಕೋಲಾರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಕನ್ನಡ ಹೋರಾಟಗಾರರನ್ನು ಬಂಧಿಸಲು ಸೂಚನೆ ನೀಡಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಪ್ರತಿಭಟನಾಕಾರರು ಮುಂದಾದರು. ಇದನ್ನು ಪೊಲೀಸರು ತಡೆದರು. ಕರವೇ ಜಿಲ್ಲಾಧ್ಯಕ್ಷ ರಾಘವೇಂದ್ರ ಮತ್ತಿತರರು ಭಾಗಿಯಾಗಿದ್ದರು.

ಬೆಳಗಾವಿಯಲ್ಲಿ ಟೈರ್‌ಗೆ ಬೆಂಕಿ‌ ಹಚ್ಚಿ ಆಕ್ರೋಶ: ಚನ್ನಮ್ಮ ವೃತ್ತದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಟೈರ್‌ಗೆ ಬೆಂಕಿ‌ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ನಾಡು, ನುಡಿ, ಜಲಕ್ಕಾಗಿ ತಮ್ಮ ಜೀವವನ್ನೇ ಮುಡಿಪಿಟ್ಟಿರುವ ನಾರಾಯಣಗೌಡರನ್ನು ಬಂಧಿಸಿದ್ದು ಸರಿಯಲ್ಲ. ಇದು ಎಲ್ಲ ಕನ್ನಡ ಹೋರಾಟಗಾರರಿಗೆ ಮಾಡಿದ ದೊಡ್ಡ ಅಪಮಾನ ಎಂದು ಘೋಷಣೆ ಕೂಗಿದರು.

ವಿಜಯಪುರದಲ್ಲಿ ಪ್ರತಿಭಟನೆ: ಗಾಂಧಿ ಚೌಕ್​ನಲ್ಲಿ ಕರವೇ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದರು. ನಿನ್ನೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಸರಕಾರ ಈ ಕುರಿತು ಗೊಂದಲ ಸೃಷ್ಟಿಸಿ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿದೆ ಎಂದು ಕಿಡಿಕಾರಿದರು. ಜಿಲ್ಲೆಯಲ್ಲೂ ಅಂಗಡಿ-ಮುಂಗಟ್ಟು, ಶಾಲಾ, ಕಾಲೇಜುಗಳ ಜಾಹೀರಾತು ಫಲಕಗಳು ಆಂಗ್ಲ ಭಾಷೆಯಲ್ಲಿವೆ. ಮಹಾನಗರ ಪಾಲಿಕೆ ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು ಕೂಡಲೇ ಕನ್ನಡ ಫಲಕ ಅಳವಡಿಸುವಂತೆ ಸೂಚನೆ ನೀಡಬೇಕು. ಆಂಗ್ಲ ಭಾಷೆಯ ಫಲಕ ತೆರವುಗೊಳಿಸಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.

ಇದನ್ನೂ ಓದಿ:ಕನ್ನಡದಲ್ಲಿ ನಾಮಫಲಕಕ್ಕೆ ಕರವೇ​ ಆಗ್ರಹ: ಇಂಗ್ಲಿಷ್​ ಫಲಕಗಳನ್ನು​ ಕಿತ್ತುಹಾಕಿದ ಕಾರ್ಯಕರ್ತರು, ನಾರಾಯಣಗೌಡ ಸೇರಿ ಹಲವರು ಪೊಲೀಸ್​ ವಶಕ್ಕೆ

Last Updated : Dec 29, 2023, 10:22 AM IST

ABOUT THE AUTHOR

...view details