ಕರ್ನಾಟಕ

karnataka

ETV Bharat / state

ವರ್ತೂರು ಪ್ರಕಾಶ್ ಹುಟ್ಟುಹಬ್ಬ: ಬಿರಿಯಾನಿಗೆ ಮುಗಿಬಿದ್ದ ಜನರಿಗೆ ಲಾಠಿ ಏಟು - ಈಟಿವಿ ಭಾರತ ಕನ್ನಡ ನ್ಯೂಸ್​​

ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಹುಟ್ಟುಹಬ್ಬದ ಹಿನ್ನೆಲೆ ಬಿರಿಯಾನಿಗಾಗಿ ಜನರು ಮುಗಿಬಿದ್ದಿದ್ದು, ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

people-rushed-to-biriyani-in-varthur-prakash-birthday-at-kolar
ವರ್ತೂರ್ ಪ್ರಕಾಶ್ ಹುಟ್ಟುಹಬ್ಬ: ಬಿರಿಯಾನಿಗೆ ಮುಗಿಬಿದ್ದ ಜನರಿಗೆ ಬಿತ್ತು ಲಾಠಿ ಏಟು

By

Published : Dec 20, 2022, 6:23 PM IST

Updated : Dec 20, 2022, 7:28 PM IST

ವರ್ತೂರು ಪ್ರಕಾಶ್ ಹುಟ್ಟುಹಬ್ಬ: ಬಿರಿಯಾನಿಗೆ ಮುಗಿಬಿದ್ದ ಜನರಿಗೆ ಲಾಠಿ ಏಟು

ಕೋಲಾರ : ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಹುಟ್ಟುಹಬ್ಬದ ಹಿನ್ನೆಲೆ ಬಿರಿಯಾನಿಗಾಗಿ ಜನರು ಮುಗಿಬಿದ್ದಿದ್ದು, ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ.

ಇಂದು ಕೋಲಾರ ನಗರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಹುಟ್ಟುಹಬ್ಬದ ಕಾರ್ಯಕ್ರಮದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಗಳಿಗೆ ಭರ್ಜರಿ ಚಿಕನ್​ ಬಿರಿಯಾನಿ ಮಾಡಲಾಗಿತ್ತು‌. ಕಾರ್ಯಕ್ರಮ ಮುಗಿದ ನಂತರ ಜನರು ಬಿರಿಯಾನಿಗಾಗಿ ಜನರು ಮುಗಿಬಿದ್ದಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿದೆ. ಈ ಸಂದರ್ಭ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ವೃದ್ಧರೊಬ್ಬರ ಮೇಲೆ ಲಾಠಿ ಬೀಸಿದ್ದರಿಂದ ವೃದ್ಧನ ತಲೆಗೆ ಗಾಯವಾಗಿ ರಕ್ತ ಸುರಿದಿದೆ‌.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು ಬಿರಿಯಾನಿ ಪಾತ್ರೆಗೆ ಕೈ ಹಾಕಿದ್ದಲ್ಲದೆ, ಬಿರಿಯಾನಿಯನ್ನು ಗೋಣಿಗೆ ತುಂಬಿಸಿಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 5 ಸಾವಿರ ಕೆಜಿ ಚಿಕನ್​ ಬಿರಿಯಾನಿ ಸಿದ್ಧಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವ ಮುನಿರತ್ನ, ಆರೋಗ್ಯ ಸಚಿವ ಸುಧಾಕರ್​, ಸಂಸದ ಮುನಿಸ್ವಾಮಿ ಮತ್ತಿತರು ಭಾಗಿಯಾಗಿದ್ದರು.

ಇದನ್ನೂ ಓದಿ :ಶಾಸಕ ರಿಜ್ವಾನ್ ಬೆಂಬಲಿಗರು ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ್ದಾರೆ.. ಮಹಿಳೆ ಆರೋಪ

Last Updated : Dec 20, 2022, 7:28 PM IST

ABOUT THE AUTHOR

...view details