ಕೋಲಾರ: ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ನಿವಾಸದ ಮೇಲೆ ಇಂದು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಂಜೇಗೌಡ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ಧಾರೆ. ಕೊಮ್ಮನಹಳ್ಳಿಯಲ್ಲಿರುವ ಇವರ ಮನೆ, ಹುತ್ತೂರು ಹೋಬಳಿಯಲ್ಲಿರುವ ಕೋಚಿಮುಲ್ ಕಚೇರಿ ಮತ್ತು ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್ನಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ನಿವಾಸ, ಕಚೇರಿಗಳ ಮೇಲೆ ಇಡಿ ದಾಳಿ - ED attack
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಮನೆ, ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.
ಇಡಿ ದಾಳಿ
Published : Jan 8, 2024, 9:07 AM IST
|Updated : Jan 8, 2024, 10:52 AM IST
ಆಪ್ತ ಸಹಾಯಕನ ಮನೆ ಮೇಲೂ ದಾಳಿ:ಅಧಿಕಾರಿಗಳು ಏಕಕಾಲದಲ್ಲಿ 10 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ನಂಜೇಗೌಡರ ಆಪ್ತ ಸಹಾಯಕ ಹರೀಶ್ ಮನೆ ಮೇಲೂ ದಾಳಿ ನಡೆದಿದೆ. ಮಾಲೂರು ತಾಲೂಕಿನ ದೊಡ್ಡಮಲೆ ಗ್ರಾಮದಲ್ಲಿ ಹರೀಶ್ ಮನೆ ಇದ್ದು ಶೋಧ ನಡೆಸುತ್ತಿದ್ದಾರೆ. ಹಾಗೆಯೇ ಕೋಚಿಮುಲ್ ಎಂಡಿ ಗೋಪಾಲ ಮೂರ್ತಿ ಅವರ ನಿವಾಸದ ಮೇಲೆ ಕೂಡ ದಾಳಿ ನಡೆದಿದೆ.
ಇದನ್ನೂ ಓದಿ:ಮಂಗಳೂರು: ಮೂಡಾ ಆಯುಕ್ತರ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಪ್ರಕರಣ ದಾಖಲು
Last Updated : Jan 8, 2024, 10:52 AM IST