ಕೋಲಾರ:ಯುವತಿಯೊಂದಿಗೆ ಪರಾರಿಯಾಗಿದ್ದ ದತ್ತಾತ್ರೇಯ ಅವಧೂತ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದು ಸ್ವಾಮೀಜಿ ವಿರುದ್ಧ ವಂಚನೆ ಪ್ರಕರಣ, ಹಾಗೂ 420 ಕೇಸ್ ದಾಖಲು ಮಾಡಲಾಗಿದೆ.
ಯುವತಿಯೊಂದಿಗೆ ಪರಾರಿಯಾಗಿದ್ದ ಸ್ವಾಮೀಜಿ ಕೊನೆಗೂ ಅಂದರ್... ಸಿಕ್ಕಿದ್ದು ಹೀಗೆ! - ಯುವತಿಯೊಂದಿಗೆ ಪರಾರಿಯಾಗಿದ್ದ ದತ್ತಾತ್ರೇಯ
ಯುವತಿಯನ್ನು ನಂಬಿಸಿ ಆಕೆಯೊಂದಿಗೆ ಪರಾರಿಯಾಗಿದ್ದ ಸ್ವಾಮೀಜಿಯೊಬ್ಬ ಮಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ.
ದತ್ತಾತ್ರೇಯ ಅವಧೂತ ಸ್ವಾಮೀಜಿ, ಕೋಲಾರ ತಾಲೂಕಿನ ಹೊಳಲಿ ಗ್ರಾಮದ 20 ವರ್ಷದ ಶ್ಯಾಮಲಾ ಎಂಬ ಯುವತಿಯನ್ನು ನಂಬಿಸಿ ಆಕೆಯೊಂದಿಗೆ ಫೆ.27 ರಂದು ಪರಾರಿಯಾಗಿದ್ದ, ಈ ಕುರಿತು ಯುವತಿಯ ಸಂಬಂಧಿಕರು ದೂರು ನೀಡಿದ್ದರು. ಪ್ರಕರಣವನ್ನು ಬೆನ್ನತ್ತಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಕಳ್ಳ ಸ್ವಾಮೀಜಿಯನ್ನು ಬಂಧಿಸಿ ವಂಚನೆ ಪ್ರಕರಣ, ಹಾಗೂ 420 ಕೇಸ್ ದಾಖಲು ಮಾಡಿದ್ದಾರೆ.
ದತ್ತಾತ್ರೇಯ ಅವಧೂತ ಸ್ವಾಮಿ ಎಂದು ಹೇಳಿಕೊಂಡಿರುವ ಈತನ ಹೆಸರು ರಾಘವೇಂದ್ರ, ಯುವತಿ ಶ್ಯಾಮಲಾಳನ್ನು ನಂಬಿಸಿದ್ದಲ್ಲದೇ, ಈ ಹಿಂದೆ 9 ಜನರಿಂದ ಹಣ ಕೂಡ ಪಡೆದು ಪರಾರಿಯಾಗಿದ್ದ ಎನ್ನಲಾಗಿದೆ. ಮಂಗಳೂರಿನಲ್ಲಿ ಯುವತಿಯೊಂದಿಗೆ ಇರುವ ಮಾಹಿತಿ ಪಡೆದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ.