ಕೋಲಾರ:ಭಾರೀ ಗಾತ್ರದ ಚಿರತೆಯೊಂದು ಮನೆಯ ಸುತ್ತಮುತ್ತ ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಮನೆಯೊಂದರ ಬಳಿ ಚಿರತೆ ಸುತ್ತಾಡಿದೆ.
ಮನೆ ಬಾಗಿಲ ಬಳಿಯೇ ಚಿರತೆ ಸುತ್ತಾಟ... ಸಿಸಿಟಿವಿಯಲ್ಲಿ ದೃಶ್ಯ ಸೆರೆ! - ಊರಿಗೆ ಬಂದ ಚಿರತೆ
ಮನೆಯ ಬಾಗಿಲಿನ ಬಳಿಯೇ ಸುತ್ತಾಟ ನಡೆಸಿದ ಚಿರತೆ ಬೇಟೆಗಾಗಿ ಬಂದಿದ್ದು ಸ್ಪಷ್ಟವಾಗಿದೆ. ಅದೃಷ್ಟವಶಾತ್ ತಡರಾತ್ರಿಯಾಗಿದ್ದರಿಂದ ಯಾರೊಬ್ಬರೂ ಹೊರಗೆ ಇರಲಿಲ್ಲ. ಈ ದೃಶ್ಯಾವಳಿಗಳು ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಮನೆಯ ಬಾಗಿಲಿನ ಬಳಿಯೇ ಸುತ್ತಾಟ ನಡೆಸಿದ ಚಿರತೆ ಬೇಟೆಗಾಗಿ ಬಂದಿದ್ದು ಸ್ಪಷ್ಟವಾಗಿದೆ. ಅದೃಷ್ಟವಶಾತ್ ತಡರಾತ್ರಿಯಾಗಿದ್ದರಿಂದ ಯಾರೊಬ್ಬರೂ ಹೊರಗೆ ಇರಲಿಲ್ಲ. ಇದ್ರಿಂದಾಗಿ ಚಿರತೆ ಅಲ್ಲಿಂದ ವಾಪಸಾಗಿದೆ. ಈ ದೃಶ್ಯಾವಳಿಗಳು ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಹೊನ್ನಶೆಟ್ಟಹಳ್ಳಿ, ದೇವರಾಯಸಮುದ್ರ ಸುತ್ತಮುತ್ತಲಿನ ಗ್ರಾಮಗಳ ಬಳಿ ಸಾಕಷ್ಟು ಬೆಟ್ಟಗಳಿದ್ದು, ಹಲವಾರು ಚಿರತೆಗಳು ಬೆಟ್ಟದಲ್ಲಿ ವಾಸವಾಗಿವೆ. ಜೊತೆಗೆ ಇತ್ತೀಚೆಗೆ ಗ್ರಾಮಗಳತ್ತ ಮುಖ ಮಾಡಿರುವ ಚಿರತೆಗಳು ಹಸು ಸೇರಿದಂತೆ ಗ್ರಾಮದಲ್ಲಿನ ಕುರಿಗಳನ್ನ ಹೊತ್ತೊಯ್ದಿವೆ. ಇದ್ರಿಂದ ಈ ಭಾಗದ ಜನರು ಆತಂಕದಲ್ಲಿಯೇ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದರೂ, ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.