ಕರ್ನಾಟಕ

karnataka

ETV Bharat / state

ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ಆರೋಪ: ಶಿಕ್ಷಕನ ಅಮಾನತಿಗೆ ಆಗ್ರಹ - teacher misbehaving with students at kolar

ಕೋಲಾರ ತಾಲೂಕಿನ ನರಸಾಪುರ ಗ್ರಾಮದ ಪಬ್ಲಿಕ್ ‌ಶಾಲೆಯ‌ ಶಿಕ್ಷಕ ಪ್ರಕಾಶ್ ವಿದ್ಯಾರ್ಥಿನಿಯರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಪೋಷಕರು ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.

Allegation on a teacher
ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ತೋರಿದ ಆರೋಪ

By

Published : Dec 7, 2022, 8:02 PM IST

ಕೋಲಾರ: 10ನೇ ತರಗತಿ ವಿದ್ಯಾರ್ಥಿನಿಯ ಜೊತೆಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಶಿಕ್ಷಕನನ್ನು ಅಮಾನತು ಮಾಡುವಂತೆ‌‌ ಪೋಷಕರು‌ ಒತ್ತಾಯಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ನರಸಾಪುರ ಗ್ರಾಮದ ಪಬ್ಲಿಕ್ ‌ಶಾಲೆಯ‌ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಜೊತೆ ಅನುಚಿತ ಹಾಗೂ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿದ್ಯಾರ್ಥಿನಿಯರ ಜೊತೆ ಶಿಕ್ಷಕ ಅನುಚಿತ ವರ್ತನೆ ತೋರಿದ ಆರೋಪ

ವಿದ್ಯಾರ್ಥಿಗಳಿಗೆ ಹನಿಮೂನ್ ಹೇಗಿರುತ್ತೆ ಎಂದು ಪ್ರಶ್ನೆ ಮಾಡುವುದು?, ವಿದ್ಯಾರ್ಥಿನಿಯರ ಮೈ ಮುಟ್ಟಿ ಮಾತನಾಡುವುದು ಮಾಡುತ್ತಿದ್ದಾರೆಂದು ಪೋಷಕರು ತಿಳಿಸಿದ್ದಾರೆ. ಕನ್ನಡ ಶಿಕ್ಷಕನ ವಿರುದ್ದ ಈಗಾಗಲೇ ಹಲವಾರು ದೂರುಗಳಿವೆ. ವಿಷಯ ತಿಳಿದು ಶಾಲೆಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಣ್ಣಯ್ಯ, ನೀಡಿ‌ ಶಿಕ್ಷಕನ ವಿಚಾರಣೆ ನಡೆಸಿದ್ದಾರೆ.

ಈ ಹಿಂದೆ ಕೆಲಸ ಮಾಡಿದ ಶಾಲೆಯಲ್ಲೂ ವಿದ್ಯಾರ್ಥಿನಿಯರ ಜೊತೆಗೆ ಅನುಚಿತವಾಗಿ ವರ್ತಿಸಿ ಆರೋಪಿತ ಶಿಕ್ಷಕ‌ ಅಮಾನತುಗೊಂಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಮಗ್ಗಿ ಹೇಳದ ಮಕ್ಕಳಿಗೆ ಮನಬಂದಂತೆ ಥಳಿಸಿದ ಶಿಕ್ಷಕ ಅಮಾನತು: ವಿಡಿಯೋ

ABOUT THE AUTHOR

...view details