ವಿರಾಜಪೇಟೆ (ಕೊಡಗು):ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತಾಲೂಕಿನ ಹೈಸೆಡ್ಲುರಿನ ಬಾಲಾಜಿ ಕೀರೆಹೊಳೆಯಲ್ಲಿ ನಡೆದಿದೆ.
ಮಂಡೆಂಗಡ ಬೋಪಣ್ಣ ಮತ್ತು ಮನೇಶ್ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕರಾಗಿದ್ದು, ರಜೆ ದಿನವಾದ್ದರಿಂದ ಮಧ್ಯಾಹ್ನ 12 ಗಂಟೆಗೆ ಇಬ್ಬರು ಈಜಲು ತೆರಳಿದ್ದಾಗ ದುರ್ಘಟನೆ ನಡೆದಿದೆ.
ಇದನ್ನೂ ಓದಿ:ಯುವಕನಿಂದ ಅಪ್ರಾಪ್ತೆಗೆ 'ಲವ್' ಕಾಟ: ಬಾವಿಗೆ ಹಾರಿ ಸಾವಿಗೆ ಶರಣಾದ ಬಾಲಕಿ
ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಈ ಯುವಕರನ್ನು ರಕ್ಷಿಸಲು ಮುಂದಾದರೂ ಅವರ ಯತ್ನ ಸಫಲವಾಗಿಲ್ಲ. ಸ್ಥಳಕ್ಕೆ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ರಾಮರೆಡ್ಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹಗಳನ್ನು ಗೋಣಿಕೊಪ್ಪ ಶವಾಗಾರಕ್ಕೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.