ಕೊಡಗು:ಅಡಿಕೆ ಕದಿಯಲು ಮುಂದಾದ ಕಳ್ಳನೊಬ್ಬ ಮನೆ ಮಾಲೀಕನ ಗುಂಡೇಟಿಗೆ ಬಲಿಯಾಗಿರುವ ಘಟನೆ ಭಾಗಮಂಡಲ ಸಮೀಪದ ಕರಿಕೆ ಗ್ರಾಮದಲ್ಲಿ ನಡೆದಿದೆ.
ಅಡಿಕೆ ಕದಿಯಲು ಹೋಗಿ ಗುಂಡೇಟಿಗೆ ಬಲಿಯಾದ ಕಳ್ಳ.. - ಮನೆ ಮಾಲೀಕ
ಅಡಿಕೆ ಕದಿಯಲು ಹೋದ ಸಂದರ್ಭದಲ್ಲಿ ಮನೆ ಮಾಲೀಕನ ಗುಂಡೇಟಿಗೆ ಕಳ್ಳ ಬಲಿಯಾಗಿರುವ ಘಟನೆ ಭಾಗಮಂಡಲ ಸಮೀಪದ ಕರಿಕೆ ಗ್ರಾಮದಲ್ಲಿ ನಡೆದಿದೆ.
ಗುಂಡೇಟಿಗೆ ಬಲಿಯಾದ ವ್ಯಕ್ತಿ
ದೇವಂಗೋಡಿ ಗ್ರಾಮದ ಗಣೇಶ್ ಎಂಬಾತ ಗುಂಡಿನ ದಾಳಿಗೆ ಮೃತಪಟ್ಟ ಕಳ್ಳ. ಮಂಡೇಡಿ ಮೋಣ್ಣಪ್ಪ ಅವರ ಮನೆ ಕಳ್ಳತ ನಡೆದ ಸಂದರ್ಭ ಮನೆ ಮಾಲೀಕ ಗುಂಡು ಹಾರಿಸಿದ್ದಾರೆ. ಈ ಹಿಂದೆ ಕೂಡ ಗ್ರಾಮದಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಈತ ಸಿಕ್ಕಿ ಬಿದ್ದಿದ್ದನು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.