ಕೊಡಗು:ವಿದ್ಯಾರ್ಥಿಗಳಿಗೆ ತನ್ನ ಜೀವನ ಮುಡಿಪಾಗಿಟ್ಟಿದ್ದ ಶಿಕ್ಷಕಿ ಅಕಾಲಿಕ ಮರಣ ಹೊಂದಿದ್ದು, ಬಹು ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಜಿಲ್ಲೆಯ ಮಡಿಕೇರಿ ತಾಲೂಕಿನ ಸುದರ್ಶನ ಬಡಾವಣೆ ನಿವಾಸಿ ಶಿಕ್ಷಕಿ ಆಶಾ ಎಂಬವರು ಅಂಗಾಂಗ ದಾನ ಮಾಡಿದ್ದಾರೆ. ಬಹು ಅಂಗಾಂಗ ದಾನ ಮಾಡುವ ಮೂಲಕ 8 ಮಂದಿಯ ಬಾಳಿಗೆ ಆಸರೆಯಾಗಿದ್ದಾರೆ.
ಸುದರ್ಶನ ಬಡಾವಣೆಯಲ್ಲಿ ಕಳೆದ 18 ವರ್ಷಗಳಿಂದ ಮಕ್ಕಳ ಆರೈಕಾ ಕೇಂದ್ರ ನಡೆಸಿಕೊಂಡು ಬಂದಿದ್ದ ಶಿಕ್ಷಕಿ ಆಶಾ ಮಕ್ಕಳ ಭವಿಷ್ಯ ಉಜ್ವಲ ಗೊಳಿಸಲು ಸಾಕಷ್ಟು ಶ್ರಮಪಟ್ಟಿದ್ದರು. ಹಲವು ವರ್ಷಗಳಿಂದ ಮಕ್ಕಳ ಆರೈಕೆಯಲ್ಲಿ ತೊಡಗಿದ್ದರು. ಆದರೆ, ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಗಳ ಮನೆಗೆ ತೆರಳಿದ್ದ ವೇಳೆ ಆಶಾರವರ ಮೆದುಳು ಪಾರ್ಶ್ವವಾಯುವಿಗೆ ಒಳಗಾಗಿತ್ತು.