ಕೊಡಗು:ಕಾಫಿ ವ್ಯಾಪಾರಿಯೊಬ್ಬ ತನ್ನ ಮಳಿಗೆಯಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುದಿಕೇರಿ ಗ್ರಾಮದಲ್ಲಿ ನಡೆದಿದೆ.
ಕೊಡಗಿನಲ್ಲಿ ಗುಂಡಿಕ್ಕಿಕೊಂಡು ವ್ಯಾಪಾರಿ ಆತ್ಮಹತ್ಯೆ ! - ಇತ್ತೀಚಿನ ಕೊಡಗು ಸುದ್ದಿ
ಹುದಿಕೇರಿ ಗ್ರಾಮದ ಅಚ್ಚಿಯಂಡ ಸುನೀಲ್ (45) ಎಂಬ ಕಾಫಿ ವ್ಯಾಪಾರಿಯೊಬ್ಬ ತನ್ನ ಮಳಿಗೆಯಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು ನಿಖರ ಕಾರಣ ತಿಳಿದುಬಂದಿಲ್ಲ.
ಗುಂಡಿಕ್ಕಿಕೊಂಡು ವ್ಯಾಪಾರಿ ಆತ್ಮಹತ್ಯೆ !
ಗ್ರಾಮದ ಅಚ್ಚಿಯಂಡ ಸುನೀಲ್ (45) ಎಂಬಾತ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಹುದಿಕೇರಿಯ ಮಹಾದೇವ ದೇವಾಲಯ ಮುಂಭಾಗದ ಮಳಿಗೆಯಲ್ಲಿ ರಿವಾಲ್ವರ್ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಳೆದ 20 ವರ್ಷಗಳಿಂದ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದರು. ಇನ್ನೂ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಸದ್ಯ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.