ಕೊಡಗು: ವಿರಾಜಪೇಟೆ ಪಟ್ಟಣದ ಪಂಜರುಪೇಟೆಯಲ್ಲಿ ವಸತಿ ಗೃಹವೊಂದನ್ನು ಕ್ವಾರಂಟೈನ್ ಬಳಸಿಕೊಂಡಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನಮ್ಮ ಊರಲ್ಲಿ ಕ್ವಾರಂಟೈನ್ ಬೇಡ, ಇಲ್ಲಿಂದ ಸ್ಥಳಾಂತರಿಸಿ: ಸ್ಥಳೀಯರ ವಿರೋಧ - kodagu, virajpet latest news
ಪಂಜರುಪೇಟೆಯಲ್ಲಿರುವ ಆಲ್ನೂರ್ ಹೋಟೆಲ್ನಲ್ಲಿ ಹೊರ ಜಿಲ್ಲೆಯಿಂದ ಬಂದಂತಹ ಮೂವರನ್ನು ಇರಿಸಲಾಗಿತ್ತು. ಇದಕ್ಕೆ ಸುತ್ತಮುತ್ತಲಿನ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವಂತವರಿಗೆ, ತಾಲೂಕು ಕೇಂದ್ರದಲ್ಲಿ ಇರುವ ಲಾಡ್ಜ್ಗಳಲ್ಲಿ ಕ್ವಾಂರಂಟೈನ್ ಮಾಡಲು ಬಳಸಿಕೊಳ್ಳಲು ಜಿಲ್ಲಾಡಳಿತ ಅನುಮತಿ ನೀಡಿತು. ಅದರಂತೆ ಪಂಜರುಪೇಟೆಯಲ್ಲಿರುವ ಆಲ್ನೂರ್ ಹೋಟೆಲ್ನಲ್ಲಿ ಹೊರ ಜಿಲ್ಲೆಯಿಂದ ಬಂದಂತಹ ಮೂವರನ್ನು ಇರಿಸಲಾಗಿತ್ತು. ಇದಕ್ಕೆ ಸುತ್ತಮುತ್ತಲಿನ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಸ್ಥಳೀಯರು, ಹೊರಗಿನಿಂದ ಬಂದಂತಹ ವ್ಯಕ್ತಿಗಳನ್ನು ಇಲ್ಲಿ ತಂಗಲು ಅನುವು ಮಾಡಿಕೊಟ್ಟಿದ್ದರಿಂದ ನಮಗೆ ಹೊರಗಡೆ ತಿರುಗಾಡಲು ಭಯವಾಗುತ್ತಿದೆ. ದಯವಿಟ್ಟು ಇವರನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು. ತಪ್ಪಿದರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.