ಕರ್ನಾಟಕ

karnataka

ETV Bharat / state

ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಕೋವಿಡ್ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ.. - Talakaveri theerthodbhava

ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಭಕ್ತರಿಗೆ ಕೋವಿಡ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಮಿತಿಮೀರುತ್ತಿರುವ ಕೋವಿಡ್‌ನಿಂದ ಅತ್ಯಂತ ಕಟ್ಟುನಿಟ್ಟಿನಲ್ಲಿ ನಿಯಮಗಳನ್ನು ಜಾರಿಗೆ ತರುವ ಮೂಲಕ ಕೋವಿಡ್ ಆತಂಕದ ನಡುವೆಯೂ ತೀರ್ಥೋದ್ಭವಕ್ಕೆ ಸಿದ್ಧತೆ ನಡೆಸಲಾಗಿದೆ.

kodagutalakaveri-theerthodbhava-covid-strict-action
ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಕೋವಿಡ್ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ..

By

Published : Oct 15, 2020, 8:52 PM IST

ಕೊಡಗು(ತಲಕಾವೇರಿ): ಕೊಡಗಿನ ಕುಲದೇವತೆ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಲು ಕ್ಷಣಗಣನೆ ಆರಂಭವಾಗಿದೆ. ಆದರೆ ಕೋವಿಡ್ ವೈರಸ್ ರಾಜ್ಯದಲ್ಲಿಯೇ ಹೆಚ್ಚು ಕೊಡಗು ಜಿಲ್ಲೆಯಲ್ಲಿ ಹರಡುತ್ತಿರುವುದರಿಂದ ಈ ಬಾರಿ ತೀರ್ಥೋದ್ಭವದ ಕ್ಷಣದಲ್ಲಿ ಸಾರ್ವಜನಿಕರು ಹೆಚ್ಚು ಸೇರದಂತೆ ನಿರ್ಬಂಧ ಹೇರಲಾಗಿದೆ.

ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ, ಕೋವಿಡ್ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ..

ಈಗಾಗಲೇ ಎಲ್ಲಾ ವಿಧಿವಿಧಾನಗಳು ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಸೆಪ್ಟೆಂಬರ್ 26 ರಂದೇ ಪತ್ತಾಯಕ್ಕೆ ಅಕ್ಕಿ ಹಾಕಲಾಗಿದ್ದು, ನಿತ್ಯವೂ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗುತ್ತಿವೆ. ನಾಳೆ ಬೆಳಿಗ್ಗೆ ಬಾಗಮಂಡಲದಿಂದ ತಲಕಾವೇರಿಗೆ ಕಾವೇರಿ ಮಾತೆಯ ಚಿನ್ನಾಭರಣಗಳನ್ನು ಶಾಸ್ತ್ರೋಕ್ತವಾಗಿ ಕೊಂಡೊಯ್ಯಲಾಗುವುದು. ಅಕ್ಟೋಬರ್ 17 ರಂದು ಬೆಳಿಗ್ಗೆ 7 ಗಂಟೆ 3 ನಿಮಿಷಕ್ಕೆ ಸರಿಯಾಗಿ ತೀರ್ಥೋದ್ಭವವಾಗಲಿದೆ. ಅರ್ಚಕ ಗೋಪಾಲ ಆಚಾರ್ ಅವರ ನೇತೃತ್ವದಲ್ಲಿ ಎಲ್ಲಾ ಪೂಜಾ ವಿಧಿವಿಧಾನಗಳು ನಡೆಯಲಿವೆ.

ಪ್ರತೀ ಬಾರಿಯಂತೆ ಈ ಬಾರಿ ಕೊಳದಲ್ಲಿ ಸ್ನಾನ ಮಾಡಲು ಹಾಗೂ ತೀರ್ಥ ಪ್ರೋಕ್ಷಣೆಗೆ ಅವಕಾಶ ನೀಡಿಲ್ಲ. ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಭಕ್ತರಿಗೆ ಕೋವಿಡ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಮಿತಿಮೀರುತ್ತಿರುವ ಕೋವಿಡ್‌ನಿಂದ ಅತ್ಯಂತ ಕಟ್ಟುನಿಟ್ಟಿನಲ್ಲಿ ನಿಯಮಗಳನ್ನು ಜಾರಿಗೆ ತರುವ ಮೂಲಕ ಕೋವಿಡ್ ಆತಂಕದ ನಡುವೆಯೂ ತೀರ್ಥೋದ್ಭವಕ್ಕೆ ಸಿದ್ಧತೆ ನಡೆಸಲಾಗಿದೆ. ಹೀಗಾಗಿ ಜನರು ಜಿಲ್ಲಾಡಳಿತ ಜಾರಿ ಮಾಡಿರುವ ಕೋವಿಡ್ ನಿಯಮಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಹಕರಿಸಬೇಕು ಎನ್ನೋದು ದೇವಾಲಯ ಆಡಳಿತ ಮಂಡಳಿಯ ಆಗ್ರಹ.

ABOUT THE AUTHOR

...view details