ಕೊಡಗು:ಕೊರೊನಾ ಹರಡುವ ಆತಂಕದಿಂದ ದೇಶವನ್ನು ಲಾಕ್‌ಡೌನ್ ಮಾಡಿದ ಎರಡೂವರೆ ತಿಂಗಳ ಬಳಿಕ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಕುಳಿತು ಆಹಾರ ಸೇವಿಸಲು ಮತ್ತು ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಕೊಡಗಿನ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ.
ಕೊರೊನಾತಂಕ: ಕೊಡಗಿನ ಹೋಟೆಲ್, ರೆಸಾರ್ಟ್‍ಗಳತ್ತ ಮುಖ ಮಾಡದ ಪ್ರವಾಸಿಗರು - Lockdown effect
ರಾಜ್ಯದಲ್ಲಿ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ಕುಳಿತು ಆಹಾರ ಸೇವಿಸಲು ಮತ್ತು ಉಳಿದುಕೊಳ್ಳಲು ಸರ್ಕಾರ ಅವಕಾಶ ನೀಡಿದರೂ ಪ್ರವಾಸಿಗರು ಕೊರೊನಾ ಭಯದಿಂದ ರೆಸ್ಟೋರೆಂಟ್‌ಗಳತ್ತ ಸುಳಿಯುತ್ತಿಲ್ಲ.
ಬಹುತೇಕ ಎಲ್ಲ ಸೇವೆಗಳೂ ಲಾಕ್‌ಡೌನ್‌ನಿಂದ ಮುಕ್ತವಾಗಿರುವುದರಿಂದ ರೆಸ್ಟೋರೆಂಟ್‌ಗಳತ್ತ ಪ್ರವಾಸಿಗರು, ಜನರು ಬರುವ ನಿರೀಕ್ಷೆ ಇತ್ತು. ಅದಕ್ಕಾಗಿಯೇ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು ಸಿದ್ಧತೆ ಮಾಡಿಕೊಂಡಿದ್ದರು. ಹೋಟೆಲ್ ಪ್ರವೇಶ ದ್ವಾರದಲ್ಲೇ ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಜೊತೆಗೆ ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಲಾಗಿದೆ. ರಿಸೆಪ್ಷನ್ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡುವುದಕ್ಕಾಗಿ ಮಾರ್ಕ್‌ಗಳನ್ನು ಮಾಡಲಾಗಿದೆ.
ಇನ್ನು ಗ್ರಾಹಕರು ಯಾವ ರಾಜ್ಯದಿಂದ ಬಂದಿದ್ದಾರೆ, ಅವರ ಆರೋಗ್ಯದ ಸ್ಥಿತಿ ಹೇಗಿದೆ ಎಂಬುದನ್ನೆಲ್ಲಾ ತಿಳಿದುಕೊಳ್ಳುವುದಕ್ಕಾಗಿ ಪ್ರತ್ಯೇಕ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ ಪ್ರವಾಸಿಗರು ಬಾರದೆ ಮಾಲಿಕರು ಕಂಗಾಲಾಗಿದ್ದಾರೆ.