ಕೊಡಗು:ದ್ವಿತೀಯ ಪಿಯುಸಿ ಫಲಿತಾಂಶವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಜಿಲ್ಲೆ ಶೇ.81.53 ಫಲಿತಾಂಶವನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಪಿಯು ಫಲಿತಾಂಶದಲ್ಲಿ ಕೊಡಗಿಗೆ 2ನೇ ಸ್ಥಾನ, ಇಲ್ಲೂ ಬಾಲಕಿಯರದ್ದೇ ಮೇಲುಗೈ
ಕಲಾ ವಿಭಾಗದಲ್ಲಿ 1,194 ಮಂದಿ ಪರೀಕ್ಷೆ ಬರೆದಿದ್ದು, 737 ಮಂದಿ ತೇರ್ಗಡೆಯಾಗಿ ಶೇ.61.73ರಷ್ಟು ಫಲಿತಾಂಶ ಪಡೆದುಕೊಂಡಿದೆ. ವಾಣಿಜ್ಯ ವಿಭಾಗದಲ್ಲಿ 2,691 ಮಂದಿ ಪರೀಕ್ಷೆ ಬರೆದಿದ್ದು, 2,302 ಮಂದಿ ತೇರ್ಗಡೆಯಾಗಿ ಶೇ. 84.54ರಷ್ಟು ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ 1,112 ಮಂದಿ ಪರೀಕ್ಷೆ ಬರೆದಿದ್ದು, 1,035 ಮಂದಿ ತೇರ್ಗಡೆಯಾಗಿ ಶೇ.93.08ರಷ್ಟು ಫಲಿತಾಂಶ ದೊರಕಿದೆ.
ಪಿಯುಸಿ ಪರೀಕ್ಷಾ ಫಲಿತಾಂಶ
ಶೇ.90.71 ಫಲಿತಾಂಶ ಪಡೆದಿರುವ ಉಡುಪಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಕೊಡಗು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕೊಡಗು ಜಿಲ್ಲೆಗೆ 81.53 ಫಲಿತಾಂಶ ದೊರಕಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಕಳೆದ ವರ್ಷ ಶೇ.83.31ರಷ್ಟು ಫಲಿತಾಂಶ ಪಡೆದ ಜಿಲ್ಲೆ ತೃತೀಯ ಸ್ಥಾನದಲ್ಲಿತ್ತು. ಆದ್ರೆ ಇದೇ ಮೊದಲ ಬಾರಿ ಎನ್ನುವಂತೆ, ಪರೀಕ್ಷೆ ಬರೆದ 4,997 ಮಂದಿಯಲ್ಲಿ 4,074 ಮಂದಿ ಉತ್ತೀರ್ಣರಾಗಿದ್ದಾರೆ.ಕಲಾ ವಿಭಾಗದಲ್ಲಿ 1,194 ಮಂದಿ ಪರೀಕ್ಷೆ ಬರೆದಿದ್ದು, 737 ಮಂದಿ ತೇರ್ಗಡೆಯಾಗಿ ಶೇ.61.73ರಷ್ಟು ಫಲಿತಾಂಶ ಪಡೆದುಕೊಂಡಿದೆ.
ವಾಣಿಜ್ಯ ವಿಭಾಗದಲ್ಲಿ 2,691 ಮಂದಿ ಪರೀಕ್ಷೆ ಬರೆದಿದ್ದು, 2,302 ಮಂದಿ ತೇರ್ಗಡೆಯಾಗಿ ಶೇ. 84.54ರಷ್ಟು ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ 1,112 ಮಂದಿ ಪರೀಕ್ಷೆ ಬರೆದಿದ್ದು, 1,035 ಮಂದಿ ತೇರ್ಗಡೆಯಾಗಿ ಶೇ.93.08ರಷ್ಟು ಫಲಿತಾಂಶ ದೊರಕಿದೆ.