ಕರ್ನಾಟಕ

karnataka

ETV Bharat / state

ಯಾವ ಜಿಲ್ಲೆ ಯಾವ ವಿಭಾಗದಲ್ಲಿ?:   ಗ್ರೀನ್​​ ಜೋನ್​​​ ಪರಿಧಿಯಲ್ಲಿ ಕೊಡಗು‌..! - Green Zone

ಕಳೆದ 28 ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಾರದ ಹಿನ್ನೆಲೆಯಲ್ಲಿ ಹಳದಿ ಜೋನ್​​​ನಲ್ಲಿದ್ದ ಗ್ರೀನ್ ಝೋನ್‌ಗೆ ಪಟ್ಟಿಗೆ ಸೇರಿಸಲಾಗಿದೆ.

ಕೊರೊನಾ
ಕೊರೊನಾ

By

Published : Apr 27, 2020, 10:43 PM IST

ಕೊಡಗು: ಜಿಲ್ಲೆಯಲ್ಲಿ ಇದೂವರೆಗೂ ಯಾವುದೇ ಕೊರೊನಾ ಪಾಸಿಟಿವ್​ ಪ್ರಕರಣಗಳು ಕಂಡು ಬಾರದ ಕಾರಣ, ಯೆಲ್ಲೋ ಜೋನ್​​ನಿಂದ​, ಗ್ರೀನ್ ಜೋನ್​​ ಎಂದು ಘೋಷಣೆ ಮಾಡಲಾಗಿದೆ.

ಕೊಡಗು ಜಿಲ್ಲೆಯನ್ನು ಒಳಗೊಂಡಂತೆ ಕೊರೊನಾ ಮುಕ್ತ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ಉಡುಪಿ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ಗ್ರೀನ್ ಝೋನ್ ಎಂದು ಘೋಷಿಸಲಾಗಿದೆ.

ಗ್ರೀನ್ ಝೋನ್ ಪರಿಧಿಯಲ್ಲಿ ಕೊಡಗು‌

ಕಳೆದ 28 ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಾರದ ಹಿನ್ನೆಲೆಯಲ್ಲಿ ಯೆಲ್ಲೋ ಜೋನ್​​ನಿಂದ ಗ್ರೀನ್ ಜೋನ್​​​‌ ಪಟ್ಟಿಗೆ ಸೇರಿಸಲಾಗಿದೆ. ಜಿಲ್ಲೆಯಲ್ಲಿ ಮಾರ್ಚ್ 19 ರಂದು ಒಂದು ಪಾಸಿಟಿವ್ ಪ್ರಕರಣ ಕಂಡುಬಂದಿತ್ತು. ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ ಬಳಿಕ ನೆಗೆಟಿವ್ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಏಪ್ರಿಲ್ 7 ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.

ಇದಾದ ಬಳಿಕ ಕೊಡಗು ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ವರದಿಗಳು ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯ ಸತತ 2 ವಾರದಲ್ಲಿ ಒಂದೇ ಒಂದು ಪ್ರಕರಣ ಕಂಡುಬಾರದ ಜಿಲ್ಲೆಗಳಲ್ಲಿ ಕೊಡಗು ಕೂಡ ಒಂದು ಎಂದು ಪ್ರಸ್ತಾಪಿಸಿತ್ತು. ಕೊಡಗು ಜಿಲ್ಲೆ ಗ್ರೀನ್ ಜೋನ್​​​​ ವ್ಯಾಪ್ತಿಗೆ ಬಂದಿರುವ ಕಾರಣದಿಂದ ಜಿಲ್ಲಾಧಿಕಾರಿಗಳು ವಿವೇಚನೆಗೆ ತಕ್ಕಂತೆ ನಿಯಮವನ್ನು ಸಡಿಲಿಕೆ ಮಾಡಬಹುದಾಗಿದೆ.

ABOUT THE AUTHOR

...view details