ಕೊಡಗು:ಅವರೆಲ್ಲ ಇಷ್ಟು ದಿನ ವೈಟ್ ಆ್ಯಂಡ್ ವೈಟ್ ಡ್ರೆಸ್ ಹಾಕಿಕೊಂಡು ಕೈಯಲ್ಲಿ ಇಂಜೆಕ್ಷನ್, ಕೊರಳಿಗೆ ಸ್ಟೆಥಸ್ಕೋಪ್ (stethoscope) ಹಾಕಿಕೊಂಡು ಓದಾಯ್ತು, ಲ್ಯಾಬ್ ಆಯ್ತು ಅಂತಾ ಇದ್ದ ವೈದ್ಯಕೀಯ ವಿದ್ಯಾರ್ಥಿಗಳು. ಆದ್ರೆ ಇಂದು ಮಾತ್ರ ಅವರೆಲ್ಲರೂ ಅಪ್ಟಟ ಕನ್ನಡಿಗರಂತೆ ಕನ್ನಡದ ಹಾಡಿಗೆ ಸಖತ್ ಹೆಜ್ಜೆ ಹಾಕಿದ್ರು. ಇದರಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಮಂಜಿನ ನಗರಿ ಮಡಿಕೇರಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (Madikeri Medical Sciences Institute ) ಇಂದು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ (Kannada rajyotsava) ಆಚರಣೆ ಮಾಡಲಾಯಿತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಡಿಕೇರಿಯ ವೈದ್ಯಕೀಯ ವಿದ್ಯಾರ್ಥಿಗಳು 'ಸಮಷ್ಟಿ' ಎಂಬ ವಿಚಾರವನ್ನಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಿದ್ದರು.