ಕರ್ನಾಟಕ

karnataka

ETV Bharat / state

ಬಿಜೆಪಿಯಲ್ಲಿ ಬಕೆಟ್ ಹಿಡಿದವರಿಗೆ ಸಚಿವ ಸ್ಥಾನ: ಶಾಸಕ ಅಪ್ಪಚ್ಚು ರಂಜನ್ - ಬಿಜೆಪಿಯಲ್ಲಿ ಪ್ರಾಮಾಣಿಕರಿಗೆ ಬೆಲೆಯಿಲ್ಲ

ಬಿಜೆಪಿಯಲ್ಲಿ ಬಕೆಟ್ ಹಿಡಿದವರಿಗೆ ಸಚಿವ ಸ್ಥಾನ ನೀಡಲಾಗುತ್ತಿದ್ದು, ನಾವು ಪ್ರಾಮಾಣಿಕವಾಗಿ ಇದ್ದುದಕ್ಕೆ ಏನು ಸಿಗುತ್ತಿಲ್ಲ. ಸಂಘ ಪರಿವಾರದವರು ಹೇಳಿದ್ದರಿಂದ ಪಕ್ಷದ ವಿಚಾರ ಬೀದಿಗೆ ಬರಬಾರದು ಎಂದು ಸುಮ್ಮನೆ ಇದ್ದೆವು. ಆದರೆ ಈಗ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಶಾಸಕ ಅಪ್ಪಚ್ಚು ರಂಜನ್ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ranjan
ರಂಜನ್

By

Published : Jan 16, 2021, 5:55 PM IST

ಕೊಡಗು : ಬಕೆಟ್ ಹಿಡಿದವರಿಗೆ ಸಚಿವ ಸ್ಥಾನ ಕೊಡಲಾಗುತ್ತಿದೆ, ಪ್ರಾಮಾಣಿಕರಿಗೆ ಇಲ್ಲಿ ಏನೂ ಸಿಗುತ್ತಿಲ್ಲ ಎಂದು ಕೊಡಗಿನ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಆಕ್ರೋಶ ಹೊರ ಹಾಕಿದ್ದಾರೆ.

ಬಕೆಟ್ ಹಿಡಿದವರಿಗೆ ಸಚಿವ ಸ್ಥಾನ: ಶಾಸಕ ಅಪ್ಪಚ್ಚು ರಂಜನ್
ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಈಗ ಬಿಜೆಪಿಯಲ್ಲಿ ಬಕೆಟ್ ಹಿಡಿದವರಿಗೆ ಸಚಿವ ಸ್ಥಾನ ನೀಡಲಾಗುತ್ತಿದ್ದು, ನಾವು ಪ್ರಾಮಾಣಿಕವಾಗಿ ಇದ್ದುದಕ್ಕೆ ಏನೂ ಸಿಗುತ್ತಿಲ್ಲ. ಸಂಘ ಪರಿವಾರದವರು ಹೇಳಿದಾಗ ಸುಮ್ಮನೆ ಪಕ್ಷದ ವಿಚಾರ ಬೀದಿಗೆ ಬರಬಾರದು ಎಂದು ಸುಮ್ಮನೆ ಇದ್ದೆವು. ಆದರೆ ಈಗ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಆರೋಪಿಸಿದರು.

ಹುಣಸೂರು ಉಪ ಚುನಾವಣೆಯಲ್ಲಿ ನಾನು ಚುನಾವಣಾ ಉಸ್ತುವಾರಿ ವಹಿಸಿದ್ದೆ. ಆದರೆ, ಉಪ ಚುನಾವಣೆಯಲ್ಲಿ ವಿಶ್ವನಾಥ್ ಸೋಲಲು ಸಿ.ಪಿ.ಯೋಗೇಶ್ವರ್ ಅವರೇ ಕಾರಣ ಎಂಬುದು ಸತ್ಯ. ಅಂಥವರಿಗೆ ಸಚಿವ ಸ್ಥಾನ ಕೊಟ್ಟಿರುವುದು ದುರಂತ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗಿದೆ ಎಂದು ಸ್ವಪಕ್ಷದ ವಿರುದ್ಧವೇ ಅಪ್ಪಚ್ಚುರಂಜನ್ ತಿರುಗಿಬಿದ್ದಿದ್ದಾರೆ. ರಾಜ್ಯದ ಈ ಎಲ್ಲ ಬೆಳವಣಿಗೆಯನ್ನು ಕೇಂದ್ರದ ನಾಯಕರಿಗೆ ತಿಳಿಸುವುದಾಗಿಯೂ ಹೇಳಿದರು.

ಜಮೀರ್ ಅಹ್ಮದ್ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಿರುವುದು ಸರಿಯಲ್ಲ. ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ. ಪ್ರಕೃತಿ ವಿಕೋಪಕ್ಕೆ ಒಳಗಾದ ಜಿಲ್ಲೆಗಳಿಗೆ ಮೊದಲ ಆದ್ಯತೆ ನೀಡಬೇಕಿತ್ತು ಎಂದು ತಮ್ಮ ಸರ್ಕಾರದ ವಿರುದ್ಧವೇ ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details