ಕರ್ನಾಟಕ

karnataka

ETV Bharat / state

ಶುಂಠಿ ಬೆಲೆಯಲ್ಲಿ ದಿಢೀರ್ ಕುಸಿತ.. ಉತ್ತಮ ಇಳುವರಿ ಬಂದರೂ ಕಂಗಾಲಾದ ಕೊಡಗು ರೈತರು

ಕೊಡಗು ಭಾಗದಲ್ಲಿ ಈ ಬಾರಿ ಶುಂಠಿ ಉತ್ತಮ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಗೆ ತರಬೇಕು ಎನ್ನುವ ರೈತರಿಗೆ ಈಗ ದರ ಕುಸಿತ ಕಂಗಾಲಾಗುವಂತೆ ಮಾಡಿದೆ. ಸಾಲ ಮಾಡಿ ಶುಂಠಿ ಬೆಳೆದಿದ್ದ ರೈತರು ನಷ್ಟದ ಭೀತಿ ಎದುರಿಸುವಂತಾಗಿದೆ.

ginger-market-dropped-leads-tension-over-farmers
ಶುಂಠಿ ಬೆಲೆಯಲ್ಲಿ ದಿಢೀರ್ ಕುಸಿತ

By

Published : Sep 22, 2021, 3:34 PM IST

ಕೊಡಗು: ಜಿಲ್ಲೆಯಲ್ಲಿ ಕಳೆದ 4 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷ ಶುಂಠಿಬೆಳೆ ಉತ್ತಮ ಇಳುವರಿ ಬಂದಿರುವುದರಿಂದ ಲಾಭ ತಂದು ಕೊಡುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಕೊರೊನಾ ಬಳಿಕ ಇದೀಗ ಶುಂಠಿ ದರ ಕುಸಿದಿದ್ದು, ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ.

ಕುಶಾಲನಗರ, ಸೋಮವಾರಪೇಟೆ ಭಾಗದಲ್ಲಿ ಹೆಚ್ಚಾಗಿ ಶುಂಠಿ ಬೆಳೆ ಬೆಳೆಯಲಾಗಿತ್ತು. ಬ್ಯಾಂಕ್​ನಿಂದ ಕೃಷಿ ಸಾಲ ಪಡೆದಿದ್ದ ರೈತರು ಉತ್ತಮ ದರದ ನಿರೀಕ್ಷೆಯಲ್ಲಿದ್ದರು. ಕಳೆದ ಮೂರು ವರ್ಷಗಳಿಂದ ಅಧಿಕ ಮಳೆಗೆ ಕೊಳೆ ರೋಗ ಬಂದು ಶುಂಠಿ ಬೆಳೆ ನಾಶವಾಗುತ್ತಿತ್ತು. ಆದರೆ ಈ ವರ್ಷ ಮಳೆ ಕಡಿಮೆಯಾಗಿ ಉತ್ತಮ ಫಸಲು ರೈತರ ಕೈಸೇರಿದೆ.

ಶುಂಠಿ ಬೆಲೆಯಲ್ಲಿ ದಿಢೀರ್ ಕುಸಿತ..ಉತ್ತಮ ಇಳುವರಿ ಬಂದರೂ ಕಂಗಾಲಾದ ರೈತ

ಈ ಮೊದಲು ಶುಂಠಿ ಚೀಲಕ್ಕೆ 3,000 ದಿಂದ 6,000 ರೂಪಾಯಿವರೆಗೂ ಧಾರಣೆ ಇತ್ತು. ಆದರೆ ಇದೀಗ ಚೀಲ ಶುಂಠಿಗೆ ಕೇವಲ ರೂ. 600 ರಿಂದ 700ರಷ್ಟಿದೆ. ಇದರಿಂದ ಶುಂಠಿ ಬೆಳೆದಿದ್ದ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ.

ಶುಂಠಿ ಬೆಳೆಯಲ್ಲಿ ಈ ಬಾರಿಯಾದರೂ ಲಾಭ ಗಳಿಸುವ ಕನಸು ಕಂಡಿದ್ದ ರೈತರಿಗೆ ಬೆಲೆ ಕೇಳಿ ಬರಸಿಡಿಲು ಬಡಿದಂತಾಗಿದೆ. ಸಾಲ ಮಾಡಿ ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಶುಂಠಿ ಈಗ ರೈತರಿಗೆ ಕಣ್ಣೀರು ತರಿಸುತ್ತಿದೆ.

ಇದನ್ನೂ ಓದಿ:ವಿಜಯಪುರ ಮಗು ಮಾರಾಟ ಪ್ರಕರಣಕ್ಕೆ ಟ್ವಿಸ್ಟ್​: ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಶಿಶು ಪತ್ತೆ

ABOUT THE AUTHOR

...view details