ಕರ್ನಾಟಕ

karnataka

ETV Bharat / state

ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಜೀವಿಜಯ ಮತ್ತೊಂದು ಬಾಂಬ್

ಮೊಟ್ಟೆ ಎಸೆದ ಆರೋಪಿ ಸಂಪತ್​ನನ್ನು ಅರೆಸ್ಟ್ ಮಾಡಲಾಗಿತ್ತು. ಆದರೆ, ಅವನಿಗೆ ಅನಾರೋಗ್ಯ ಅಂತ ಆಸ್ಪತ್ರೆಗೆ ಕಳುಹಿಸುವ ನಾಟಕವಾಡಲಾಗಿದೆ. ನಂತರ ಆಸ್ಪತ್ರೆಯಿಂದ ಆರೋಪಿಯನ್ನು ಎಸ್ಕೇಪ್ ಮಾಡಿಸಲಾಗಿದೆ ಎಂದು ಮಾಜಿ ಸಚಿವ ಜೀವಿಜಯ ತಿಳಿಸಿದರು.

ex-minister-jeevijaya-made-another-allegation-against-mla-appachu-ranjan
ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಜೀವಿಜಯ ಮತ್ತೊಂದು ಬಾಂಬ್

By

Published : Aug 23, 2022, 4:47 PM IST

ಕೊಡಗು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಮಾಜಿ ಸಚಿವ ಜೀವಿಜಯ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಮಡಿಕೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜೀವಿಜಯ, ಮೊಟ್ಟೆ ಎಸೆದ ಆರೋಪಿ ಸಂಪತ್​ನನ್ನು ಅಪ್ಪಚ್ಚು ರಂಜನ್ ಅವರ ಮನೆಗೆ ಕರೆಸಿ, ಅವರ ಮನೆ ಮುಂದೆಯೇ ಕಾಂಗ್ರೆಸ್ ಶಾಲು ಹಾಕಿ ಫೋಟೋ ತೆಗೆಸಿದ್ದಾರೆ. ಈ ಪೋಟೋ ಹಿಂದೆ ಇರುವ ಜಾಗವನ್ನು ನೋಡಿದರೆ ಗೊತ್ತಾಗುತ್ತದೆ ಎಂದು ಎಂದರು.

ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಜೀವಿಜಯ ಮತ್ತೊಂದು ಬಾಂಬ್

ಇದನ್ನೂ ಓದಿ:ಕೊಡಗು ಜಿಲ್ಲೆಯಾದ್ಯಂತ ಆಗಸ್ಟ್‌ 24 ರಿಂದ ನಾಲ್ಕು ದಿನ ನಿಷೇಧಾಜ್ಞೆ ಜಾರಿ

ಅಲ್ಲದೇ, ಆರೋಪಿಯು ಪೊಲೀಸ್​ ಠಾಣೆಯಿಂದ ಬಂದ ಬಳಿಕವೇ ಈ ಪೋಟೋ ಸೂಟ್ ಮಾಡಿಸಿದ್ದಾರೆ. ಇದು ಬಿಜೆಪಿಯ ಸಂಚು. ಇಂತಹ ಕೆಲಸ ಮಾಡುವುದರಿಂದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಏನು ಲಾಭವೋ ಗೊತ್ತಿಲ್ಲ. ಸಂಪತ್​ನನ್ನು ಅರೆಸ್ಟ್ ಮಾಡಲಾಗಿತ್ತು. ಆದರೆ, ಅವನಿಗೆ ಅನಾರೋಗ್ಯ ಅಂತ ಆಸ್ಪತ್ರೆಗೆ ಕಳುಹಿಸುವ ನಾಟಕವಾಡಲಾಗಿದೆ. ನಂತರ ಆಸ್ಪತ್ರೆಯಿಂದ ಆರೋಪಿಯನ್ನು ಎಸ್ಕೇಪ್ ಮಾಡಿಸಲಾಗಿದೆ ಎಂದೂ ದೂರಿದರು.

ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಜೀವಿಜಯ ಮತ್ತೊಂದು ಬಾಂಬ್

ಇದನ್ನೂ ಓದಿ:ಮಡಿಕೇರಿ ಚಲೋ ಮುಂದೂಡಿಕೆ, ಚರ್ಚಿಸಿ ಮುಂದಿನ ದಿನಾಂಕ ನಿರ್ಧಾರ: ಸಿದ್ದರಾಮಯ್ಯ

ಝೆನ್ ಕಾರಿನಲ್ಲಿ ಅಪ್ಪಚ್ಚು ರಂಜನ್ ಮನೆಗೆ ಆರೋಪಿಯನ್ನು ಕಳುಹಿಸಲಾಗಿದೆ. ಅಲ್ಲಿ ಕಾಂಗ್ರೆಸ್ ಶಾಲು ಮತ್ತು ಬಾವುಟ ಹಾಕಿ ಫೋಟೋ ತೆಗೆಯಲಾಗಿದೆ. ರಂಜನ್ ಮನೆ ಬಳಿಗೆ ಹೋಗಿ ನೋಡಿದರೆ ಸತ್ಯ ಬಯಲಾಗುತ್ತದೆ. ನನ್ನ ಆಪ್ತ ಎಂದು ಸಂಪತ್​ ಹೇಳುತ್ತಾನೆ. ಅವನು ಯಾರು ಅಂತ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅವನು ಸೇರಿಲ್ಲ‌. ಆದರೆ, ಠಾಣೆಯಲಿ ಪ್ರಕರಣ ದಾಖಲಾಗಿದ್ದು, ಸೂಕ್ತವಾದ ತನಿಖೆ ಮಾಡಿದರೆ ಸತ್ಯ ಹೊರ ಬರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ಜನರ ಶಾಂತಿ, ನೆಮ್ಮದಿಗಾಗಿ ಕೊಡಗಿನಲ್ಲಿ 144 ಸೆಕ್ಷನ್ ಜಾರಿ: ಗೃಹ ಸಚಿವ ಆರಗ ಜ್ಞಾನೇಂದ್ರ

ABOUT THE AUTHOR

...view details