ಕೊಡಗು:ಲಾಕ್‌ಡೌನ್ ಸಡಿಲಿಸಿ 3 ದಿನಗಳು ಕಳೆದಿದ್ದರೂ ಜಿಲ್ಲೆಯಲ್ಲಿ ಜನ ದಟ್ಟಣೆ ಕಂಡು ಬರುತ್ತಿಲ್ಲ. ಕೊಡಗಿನಲ್ಲಿ ಪ್ರವಾಸೋದ್ಯಮ ನಂಬಿ ಜೀವನ ನಡೆಸುತ್ತಿದ್ದ ಟ್ಯಾಕ್ಸಿ, ಆಟೋ ಚಾಲಕರು ಆರ್ಥಿಕ ಸಂಕಷ್ಠ ಎದುರಿಸುತ್ತಿದ್ದಾರೆ.
ಲಾಕ್‌ಡೌನ್ ಸಡಿಲಿಸಿದ್ದರೂ ಆಟೋ ಚಾಲಕರಿಗೆ ತಪ್ಪದ ಸಂಕಷ್ಟ - Kodagu
ಲಾಕ್‌ಡೌನ್ ಸಡಿಲಿಸಿದರೂ ಕೊಡಗಿನಲ್ಲಿ ಪ್ರವಾಸೋದ್ಯಮ ನಂಬಿ ಜೀವನ ನಡೆಸುತ್ತಿದ್ದ ಟ್ಯಾಕ್ಸಿ, ಆಟೋ ಚಾಲಕರು ಸಂಕಷ್ಠ ಎದುರಿಸುತ್ತಿದ್ದಾರೆ.
ಮಡಿಕೇರಿ ನಗರದಲ್ಲಿ ಸುಮಾರು 7 ಅಟೋ ರಿಕ್ಷಾ ನಿಲ್ದಾಣಗಳಿವೆ. ನೂರಾರು ಚಾಲಕರು ಆಟೋಗಳನ್ನು ಬಾಡಿಗೆ ತೆಗೆದುಕೊಂಡು ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಕೊರೊನಾ ಭೀತಿಯಿಂದ ಜನ ಸಂಚಾರ ಕಡಿಮೆಯಾಗಿದ್ದು, ಅಟೋ ಚಾಲಕರು ತೀರಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ದಿನವೊಂದಕ್ಕೆ 400 ರಿಂದ 500 ಆದಾಯ ಸಿಗುತ್ತಿತ್ತು. ಪ್ರಸ್ತುತ ಕೊರೊನಾ ಭೀತಿಯಿಂದ ಆಟೋ ಓಡಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ಆಗಿ ಮೂರು ದಿನ ಕಳೆದಿವೆ. ಆಟೋ ಓಡಿಸಿದರು ದಿನದ ಕೂಲಿ 30 ರಿಂದ 50 ರೂಪಾಯಿ ಸಂಪಾದನೆ ಆಗುತ್ತಿದೆ ಎಂದು ಆಟೋ ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸರ್ಕಾರ ಟ್ಯಾಕ್ಸಿ ಆಟೋ ಚಾಲಕರಿಗೆ 5 ಸಾವಿರ ರೂ ಧನ ಸಹಾಯ ನೀಡುತ್ತೇವೆ ಎಂದು ಹೇಳಿದೆ. ಆದರೆ, ಆ ಹಣವನ್ನು ಬಿಡುಗಡೆ ಮಾಡುವುದು ಅನುಮಾನ. ಈಗಾಗಲೇ ಸೇವಾ ಸಿಂಧೂ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಿದೆ. ಅದರಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವುದರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿಯೇ ಇಲ್ಲ. ಇದರಿಂದ ಆಟೋ ಚಾಲಕರು ವಂಚಿತರಾಗುತ್ತಾರೆ ಎಂದು ಅಟೋ ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.