ಸೋಮವಾರಪೇಟೆ (ಕೊಡಗು): ಏಳನೇ ತರಗತಿಯ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಅಧ್ಯಾಯ ತೆಗೆದು ಹಾಕಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಶಾಸಕ ಅಪ್ಪಚ್ಚು ರಂಜನ್ ಶ್ಲಾಘಿಸಿದ್ದಾರೆ.
ಟಿಪ್ಪು ಅಧ್ಯಾಯ ತೆಗೆದು ಹಾಕಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ: ಅಪ್ಪಚ್ಚು ರಂಜನ್
ಟಿಪ್ಪು ಸುಲ್ತಾನ್ ಅಧ್ಯಾಯವನ್ನು ಏಳನೇ ತರಗತಿಯ ಪಠ್ಯ ಪುಸ್ತಕದಿಂದ ತೆಗೆದು ಹಾಕಲು ಸಹಕರಿಸಿದ ಟಿಪ್ಪು ವಿರೋಧಿ ಹೋರಾಟ ಸಮಿತಿ, ಸಂಘ ಪರಿವಾರದ ಮುಖಂಡರು ಹಾಗೂ ಸಿಎಂ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ಧನ್ಯವಾದ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಶಾಸಕ ಅಪ್ಪಚ್ಚು ರಂಜನ್
ಟಿಪ್ಪು ಸುಲ್ತಾನ್ ಎನ್ನುವ ಹೆಸರೇ ಕೊಡಗಿಗೆ ಅಪಮಾನ. ಆತ ಏನನ್ನೂ ಮಾಡದಿದ್ದರೂ ಪಠ್ಯದಲ್ಲಿ ಆತನ ವಿಷಯವನ್ನಿಟ್ಟು ಐತಿಹಾಸಿಕವಾಗಿ ವಿಜೃಂಭಿಸುವ ಕೆಲಸ ಮಾಡಲಾಗಿತ್ತು. ಆತ ಮಾಡಿರುವುದು ಎಲ್ಲವೂ ಅನ್ಯಾಯದ ಕೆಲಸಗಳು ಎಂದು ಅವರು ಹೇಳಿದರು.
ದೇಶ ವಿರೋಧಿಯ ವಿಚಾರಗಳನ್ನು ಪಠ್ಯದಿಂದ ತೆಗೆದುಹಾಕುವಂತೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅದರಂತೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದು ಅಪ್ಪಚ್ಚು ರಂಜನ್ ತಿಳಿಸಿದರು.