ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಇಬ್ಬರಿಗೆ ಕೊರೊನಾ ದೃಢ: ಡಿಸಿ ಅನೀಸ್ ಕೆ.ಜಾಯ್ ಘೋಷಣೆ

ಕೊಡಗು ಜಿಲ್ಲೆಯಲ್ಲಿ 2 ಕೊರೊನಾ ಪಾಸಿಟಿವ್ ಪ್ರಕಣಗಳು ವರದಿಯಾಗಿದ್ದು, ಅಧಿಕೃತ ವರದಿಯನ್ನು ಇಂದು ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್
ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್

By

Published : Jun 23, 2020, 10:36 AM IST

ಕೊಡಗು: ಜಿಲ್ಲೆಯಲ್ಲಿ 2 ಕೊರೊನಾ ಪಾಸಿಟಿವ್ ಪ್ರಕಣಗಳು ವರದಿಯಾಗಿದ್ದು, ಮುಂಬೈ ಟ್ರಾವೆಲ್ ಹಿಸ್ಟರಿ ಹೊಂದಿರುವ ಸೋಮವಾರಪೇಟೆ ತಾಲೂಕಿನ‌ ಗೃಹಿಣಿಯೊಬ್ಬರ ಅಧಿಕೃತ ವರದಿಯನ್ನು ಇಂದು ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿ 9214 ಸಂಖ್ಯೆಯ ಪಾಸಿಟಿವ್ ವ್ಯಕ್ತಿ (26) ಮುಂಬೈನಲ್ಲಿ ಹೋಟೆಲ್​​​​​​​​ ಬ್ಯುಸಿನೆಸ್ ಮಾಡುತ್ತಿದ್ದರು. ಈತ ಜೂನ್ 18ರಂದು ಮುಂಬೈನಿಂದ ಖಾಸಗಿ ಬಸ್‍ನಲ್ಲಿ ಪ್ರಯಾಣ ಬೆಳೆಸಿ ಜೂನ್ 19 ರಂದು ಮಂಗಳೂರಿನ ಕೆಎಸ್‍ಆರ್‌ಟಿ‌ಸಿ ಬಸ್​ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆಗೆ ಸರ್ಕಾರಿ ಬಸ್‍ನಲ್ಲಿ ಅಲ್ಲಿಂದ ಹೊರಟು, ಸಂಜೆ 4 ಗಂಟೆ ವೇಳೆಗೆ ಮಡಿಕೇರಿಗೆ ಬಂದಿದ್ದು, ನೇರವಾಗಿ ಜಿಲ್ಲಾ ಕೊವೀಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.‌ ಜಿಲ್ಲಾಡಳಿತ ಬಸ್ ಹಾಗೂ ಪ್ರಯಾಣಿಕರ ಮಾಹಿತಿಯನ್ನು ಕಲೆ ಹಾಕುತ್ತಿದೆ. ಅಲ್ಲದೇ ಕಂಟ್ರೋಲ್ ರೂಮ್‍ನಿಂದ ಪ್ರಯಾಣಿಕರನ್ನು ಸಂಪರ್ಕಿಸಲಾಗುತ್ತಿದೆ. ವ್ಯಕ್ತಿ ನೇರವಾಗಿ ಕೋವಿಡ್​​​​​ ಆಸ್ಪತ್ರೆಗೆ ದಾಖಲಾಗಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಜಾಗವನ್ನು ಕಂಟೇನ್‍ಮೆಂಟ್ ವಲಯ ಎಂದು ಘೋಷಿಸಿಲ್ಲ ಎಂದು ತಿಳಿಸಿದರು.‌

ಸೋಮವಾರಪೇಟೆ ತಾಲೂಕಿನ ಪಿ 9215 ವ್ಯಕ್ತಿಗೆ (36) ಯಾವುದೇ ಅಂತರ್ ರಾಜ್ಯ ಟ್ರಾವೆಲ್ ಹಿಸ್ಟರಿ ಇಲ್ಲ. ಇವರು ಬೆಂಗಳೂರು ಹಾಗೂ ಗದಗ ಜಿಲ್ಲೆಗೆ ಹೋಗಿರುವುದಾಗಿ ಮಾಹಿತಿ ಇದ್ದು, ಜೂನ್ 19ರಂದು ಗಂಟಲ ದ್ರವವನ್ನು ಪರೀಕ್ಷಿಸಿ ಮನೆಗೆ ಕಳುಹಿಸಲಾಗಿತ್ತು. ಭಾನುವಾರ ರಾತ್ರಿ 11 ಗಂಟೆಗೆ ಪಾಸಿಟಿವ್ ವರದಿ ಬಂದ ತಕ್ಷಣ ಇವರನ್ನು ಕೋವಿಡ್​​ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರಸಂತೆ ಹೋಬಳಿ‌ ಗ್ರಾಮವೊಂದರ ನಿವಾಸಿಯಾದ ಇವರು ಜೂನ್ 10 ರಂದು ಬೆಂಗಳೂರಿನಿಂದ ಹುಣಸೂರಿಗೆ ಹೋಗಿ, ಜೂನ್ 15 ರಂದು ಸೋಮವಾರಪೇಟೆಗೆ ವಾಪಸ್​ ಆದ ಬಳಿಕ ಸ್ಥಳೀಯವಾಗಿ ಅಲ್ಲೇ ಸುತ್ತಾಡಿದ್ದಾರೆ. ಜೂನ್ 16ರಂದು ಗದಗ್‌ಗೆ ಹೋಗಿ ಪುನಃ 19ರಂದು ಶನಿವಾರ ಸಂತೆಗೆ ಬಂದಿದ್ದರು. ಈ ವೇಳೆ, ಆಶಾ ಕಾರ್ಯಕರ್ತೆ ಅವರ ಟ್ರಾವೆಲ್ ಹಿಸ್ಟರಿ ಆಧಾರದ ಮೇಲೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಪಾಸಿಟಿವ್ ವರದಿ ಪತ್ತೆಯಾಗಿತ್ತು. ಇದಕ್ಕೂ ಮೊದಲು ಇವರು ಹೋಬಳಿಯ ಖಾಸಗಿ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲದೇ ಬೆಳಗ್ಗೆ ಸೋಮವಾರಪೇಟೆ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದು, ಈ ವೇಳೆ, ಆರೋಗ್ಯ ಸಿಬ್ಬಂದಿ ದೂರವಾಣಿಯಲ್ಲಿ ಪಾಸಿಟಿವ್ ಇರುವುದನ್ನು ತಿಳಿಸಿದಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರು.

ಇವರು ವ್ಯಾಪಾರಕ್ಕಾಗಿ ಹಲವು ಜಿಲ್ಲೆಗಳಲ್ಲಿ ಓಡಾಡಿರುವುದರಿಂದ ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಜನರನ್ನು ಸಾಮೂಹಿಕ ತಡೆ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಸಂತೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಇತರರೊಂದಿಗೆ ಸಂಪರ್ಕ ಇದ್ದು, ಅವರ ಸುಳಿವಿಗೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ ಎಂದರು.

ಸೋಮವಾರಪೇಟೆ ತಾಲೂಕಿನ ಗೃಹಿಣಿ ಮೇ 17ರಂದು ಸ್ವಂತ ಕಾರಿನಲ್ಲಿ ಸಂಬಂಧಿಕರ ಜೊತೆ ಮುಂಬೈನಿಂದ ಮಂಡ್ಯಕ್ಕೆ ಆಗಮಿಸಿ ನಾಗಮಂಗಲ ತಾಲೂಕಿನಲ್ಲಿ 14 ದಿನಗಳು ಹೋಂ ಕ್ವಾರಂಟೈನ್‍ನಲ್ಲಿ ಇದ್ದರು. ಎರಡು ಬಾರಿಯೂ ವರದಿ ನೆಗೆಟಿವ್ ಬಂದಿತ್ತು. ಪುನಃ 7 ದಿನಗಳು ಹೋಂ ಕ್ವಾರಂಟೈನ್‍ನಲ್ಲಿದ್ದರು. ಜೂನ್ 8ರಂದು ಆಲೂರು-ಸಿದ್ದಾಪುರದ ಗಂಡನ ಮನೆಗೆ ಬಂದಿದ್ದರು. ಆಶಾ ಕಾರ್ಯಕರ್ತೆಯರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅವರಿಗೆ ಮಧ್ಯಾಹ್ನ 3 ಗಂಟೆಗೆ ಪಾಸಿಟಿವ್ ದೃಢಪಟ್ಟಿದೆ. ಆದರೆ, ಆರೋಗ್ಯ ಇಲಾಖೆಯಿಂದ ಅಧಿಕೃತ ವರದಿಗೆ ಜಿಲ್ಲಾಡಳಿತ ಕಾಯುತ್ತಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 6 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಳಿದ ನಾಲ್ವರಲ್ಲಿ ಮತ್ತೊಬ್ಬರು ಗುಣಮುಖರಾಗಿದ್ದು ಮತ್ತೊಮ್ಮೆ ಅವರ ಗಂಟಲ ದ್ರವ ವೈದ್ಯಕೀಯ ವರದಿಗೆ ಕಳುಹಿಸಿದ್ದು, ಇನ್ನೆರಡು ದಿನಗಳಲ್ಲಿ ಇವರನ್ನೂ ಬಿಡುಗಡೆ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲೇ ಒಂದು ಕೋವಿಡ್​​​​ ಪರೀಕ್ಷಾ ಪ್ರಯೋಗಾಲಯ ತೆರೆಯಲಾಗಿದೆ. ನಿತ್ಯ ಪಾಳಿ ಪ್ರಕಾರ ಸರಾಸರಿ 280 ಗಂಟಲ ದ್ರವವನ್ನು ಪರೀಕ್ಷಿಸಲಾಗುತ್ತಿದೆ. ಇದುವರೆಗೂ 5,600 ಕೊವೀಡ್ ಪರಿಕ್ಷೆಗಳನ್ನು ಮಾಡಲಾಗಿದೆ. ಅವುಗಳಲ್ಲಿ 6 ಕೋವಿಡ್​​​​ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.

ABOUT THE AUTHOR

...view details