ಕರ್ನಾಟಕ

karnataka

ETV Bharat / state

ಸಿಡಿಲು ಬಡಿದು ಸಾವು: ಸಂತ್ರಸ್ತರ ಮನೆಗೆ ತೆರಳಿ ಉಮೇಶ್ ಜಾಧವ್ ಸಾಂತ್ವನ - ಉಮೇಶ್ ಜಾಧವ್

ಸಿಡಿಲು ಬಡಿದ ಪರಿಣಾಮ ಮನೆಯ ಮೇಲ್ಚಾವಣಿ ಕುಸಿದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದರು. ಸಂಸದ ಉಮೇಶ್ ಜಾಧವ್ ಹಾಗೂ ಪುತ್ರ ಶಾಸಕ ಅವಿನಾಶ್ ಜಾಧವ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಉಮೇಶ್ ಜಾಧವ್ ಮತ್ತು ಅವಿನಾಶ್ ಜಾಧವ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.

By

Published : Jun 2, 2019, 3:23 PM IST

ಕಲಬುರಗಿ:ಸಿಡಿಲು ಬಡಿದು ಮೂವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮಕ್ಕೆ ಸಂಸದ ಉಮೇಶ್ ಜಾಧವ್ ಹಾಗೂ ಪುತ್ರ ಶಾಸಕ ಅವಿನಾಶ್ ಜಾಧವ್ ಭೇಟಿ ನೀಡಿದರು.

ಸಿಡಿಲು ಬಡಿದು ಮೇಲ್ಚಾವಣಿ ಕುಸಿದ ಮನೆಗೆ ಭೇಟಿ ನೀಡಿದ ಸಂಸದ ಮತ್ತು ಶಾಸಕ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ಸರ್ಕಾರದಿಂದ ಸಿಗುವ ಸಕಲ ಸೌಲಭ್ಯಗಳನ್ನು ದೊರಕಿಸಿಕೊಡುವುದಾಗಿ ಭರವಸೆ ಕೊಟ್ಟರು.

ಉಮೇಶ್ ಜಾಧವ್ ಮತ್ತು ಅವಿನಾಶ್ ಜಾಧವ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.

ಸಿಡಿಲು ಅಪ್ಪಳಿಸಿದ ಪರಿಣಾಮ ಮನೆಯ ಮೇಲ್ಚಾವಣಿ ಕುಸಿದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದರು. ಮೇ 31ರಂದು ರಾತ್ರಿ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಉಮೇಶ್ ಜಾಧವ್ ಮತ್ತು ಅವಿನಾಶ್ ಜಾಧವ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.

ABOUT THE AUTHOR

...view details