ಕರ್ನಾಟಕ

karnataka

ETV Bharat / state

ಸಂಗಮೇಶ್ವರ ದೇವರ ಮೂರ್ತಿಗೆ ಕನ್ನ ಹಾಕಿದ ಕಳ್ಳರು.. - ಸಂಗಮೇಶ್ವರ ದೇವಸ್ಥಾನ

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಪಟವಾದ ಗ್ರಾಮದ ಸಂಗಮೇಶ್ವರ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ದೇವರ ಮೂರ್ತಿಗೆ ಕನ್ನ ಹಾಕಿರುವ ಘಟನೆ ನಡೆದಿದೆ.

Idiol missed
ಸಂಗಮೇಶ್ವರ ದೇವರ ಮೂರ್ತಿಗೆ ಕನ್ನ ಹಾಕಿದ ಕಳ್ಳರು

By

Published : Jan 3, 2020, 11:41 AM IST

ಕಲಬುರಗಿ:ಖದೀಮರು ದೇವರ ಮೂರ್ತಿಗೆ ಕನ್ನ ಹಾಕಿರುವ ಘಟನೆ ಕಮಲಾಪುರ ತಾಲೂಕಿನ ಪಟವಾದ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಂಗಮೇಶ್ವರ ದೇವಸ್ಥಾನಕ್ಕೆ ತಡರಾತ್ರಿ ನುಗ್ಗಿದ ಕಳ್ಳರು ದೇವಸ್ಥಾನದ ಮುಖ್ಯದ್ವಾರ ಮುರಿದಿದ್ದಾರೆ. ಬಳಿಕ ಸುಮಾರು 4 ಲಕ್ಷ ಮೌಲ್ಯದ ಸಂಗಮೇಶ್ವರ ದೇವರ ಬೆಳ್ಳಿ ಮೂರ್ತಿ ಮತ್ತು ಪಾದುಕೆ ಕದ್ದೊಯ್ದಿದ್ದಾರೆ. ಬೆಳಗಿನ ಜಾವ ಪೂಜಾರಿ ದೇವಸ್ಥಾನಕ್ಕೆ ಪೂಜೆ ಮಾಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details