ಕಲಬುರಗಿ: ದೇಗುಲಕ್ಕೆ ಬರುವ ಭಕ್ತಾದಿಗಳೆಲ್ಲ ಮೊದಲಿಗೆ ಆಂಜನೇಯನಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆ ಮಲ್ಲಕಂಬವನ್ನು ಅಲುಗಾಡಿಸುತ್ತಾರೆ. ಒಂದು ವೇಳೆ ಆ ಮಲ್ಲಕಂಬ ಅಲುಗಾಡದಿದ್ರೆ, ಯಾವುದೇ ಕಾರಣಕ್ಕೂ ಅವರು ಅಂದುಕೊಂಡ ಕೆಲಸ ಆಗಲ್ಲ ಅನ್ನೋದು ಅಲ್ಲಿನ ಜನರ ನಂಬಿಕೆ..
ಇಲ್ಲಿ ಮಲ್ಲಕಂಬ ಅಲ್ಲಾಡಿದ್ರೆ ಇಷ್ಟಾರ್ಥ ಸಿದ್ಧಿಸುತ್ತದಂತೆ ಇನ್ನು ನಮ್ಮ ಕಷ್ಟಗಳನ್ನೆಲ್ಲ ಈ ದೇವರು ಬಗೆಹರಿಸುತ್ತಿದ್ದು, ನಮ್ಮ ಇಂದಿನ ಸಂತೋಷಕ್ಕೆ ಈ ಆಂಜನೇಯನೇ ಕಾರಣ ಅಂತಾರೆ ಭಕ್ತರೊಬ್ಬರು
ಹೈದರಾಬಾದ್ ನಿಜಾಮರು ಕರ್ನಾಟಕವನ್ನು ಆಳುತ್ತಿದ್ದ ಸಂದರ್ಭದಲ್ಲಿ ಈ ದೇಗುಲವನ್ನು ನಿರ್ಮಿಸಿದ್ದನಂತೆ. ನಿಜಾಮ ಸರ್ಕಾರ ಜನರನ್ನು ತನ್ನ ಮುಷ್ಠಿಯಲ್ಲಿಟ್ಟುಕೊಂಡಿದ್ದಾಗ ಈ ಆಂಜನೇಯ ರಕ್ಷಿಸುತ್ತಿದ್ದನಂತೆ. ಉದ್ಯೋಗ, ಕೌಟುಂಬಿಕ ಕಲಹ, ಆರೋಗ್ಯ ಏನೇ ಸಮಸ್ಯೆ ಇದ್ರೂ ಇಲ್ಲಿಗೆ ಬಂದರೆ ಸಂಕಷ್ಟ ನಿವಾರಣೆಯಾಗುತ್ತದಂತೆ.
ಕೇವಲ ಹೈದರಾಬಾದ್ ಕರ್ನಾಟಕದವರು ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರಂತೆ.. ಇಂದಿನ ಆಧುನಿಕತೆಯ ಮಧ್ಯೆಯೂ ಈ ಮಲ್ಲಕಂಬದ ಪವಾಡ ಜನರಲ್ಲಿ ಅಚ್ಚರಿ ಮೂಡಿಸಿದೆ.