ಕಲಬುರಗಿ: ಕಲ್ಲು ತೂರಾಟದ ನಡುವೆಯೂ ದರ್ಗಾದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಬಿಜೆಪಿ ಮುಖಂಡರು ಪೂಜೆ ಸಲ್ಲಿಸಿದರು.
ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ರಾಜಕುಮಾರ ಪಾಟೀಲ್, ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡು, ಕಡಗಂಚಿ ಮಠದ ಸ್ವಾಮೀಜಿ ಸೇರಿ ಹತ್ತು ಜನರ ತಂಡ ದರ್ಗಾದೊಳಗೆ ಹೋಗಿ ಪೂಜೆ ಮಾಡಿ ಹೊರಬಂದರು.
ಇದನ್ನೂ ಓದಿ:ಶಿವಲಿಂಗ ಪೂಜೆ ವಿಚಾರ : ಆಳಂದ ಪಟ್ಟಣದಲ್ಲಿ ಕಲ್ಲು ತೂರಾಟ, ಪರಿಸ್ಥಿತಿ ಪ್ರಕ್ಷುಬ್ಧ
ಆಳಂದ ಪಟ್ಟಣದ ಲಾಡ್ಲೆ ಮಶಾಕ ದರ್ಗಾದಲ್ಲಿ ಶಿವಲಿಂಗವಿದೆ. ಇದೇ ವಿಷಯವಾಗಿ ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಪ್ರಕ್ಷ್ಯುಬ್ಧ ವಾತಾವರಣ ನಿರ್ಮಾಣವಾಗಿದೆ. ಇಂದು ದರ್ಗಾ ಮುಂದೆ ಮುಸ್ಲಿಂ ಸಮುದಾಯದವರು ಒಂದೆಡೆ ಸೇರಿದ್ದರು. ಕಲ್ಲು ತೂರಾಟ ಕೂಡಾ ನಡೆದು ಹಲವು ವಾಹನಗಳು ಜಖಂಗೊಂಡಿವೆ. ಇದೇ ಸಂದರ್ಭದಲ್ಲಿ ಅನೇಕರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: 'ಆಳಂದ ಚಲೋ'..ಬೂದಿ ಮುಚ್ಚಿದ ಕೆಂಡದಂತಿದೆ ಕಲಬುರ್ಗಿಯ ಈ ಪಟ್ಟಣ