ಕಲಬುರಗಿ: ರಾಜ್ಯಾದ್ಯಂತ ಇಂದು ಲಾಕ್ಡೌನ್ ಜಾರಿ ಹಿನ್ನೆಲೆ ಬಸ್ ಸಂಚಾರ ಸಂಪೂರ್ಣ ಬಂದ್ ಮಾಡಿರುವ ಕಾರಣ ಬಸ್ ನಿಲ್ದಾಣದಲ್ಲಿ ಗರ್ಭಿಣಿಯ ಪರದಾಟದ ದೃಶ್ಯ ಕಂಡು ಬಂದಿದೆ.
ಲಾಕ್ಡೌನ್ನಿಂದಾಗಿ ಬಸ್ ಸಂಚಾರ ಸ್ಥಗಿತ: ಆಟೋಗಾಗಿ ಪರದಾಡಿದ ಗರ್ಭಿಣಿ..!
ಸಂಪೂರ್ಣ ಲಾಕ್ಡೌನ್ ಜಾರಿ ಹಿನ್ನೆಲೆ ಇಂದು ಬಸ್ ಸಂಚಾರವನ್ನು ಬಂದ್ ಮಾಡಲಾಗಿದ್ದು ಇದರಿಂದ ಗರ್ಭಿಣಿಯೊಬ್ಬಳು ಬಸ್ ನಿಲ್ದಾಣದಲ್ಲಿ ಪರದಾಡಬೇಕಾದ ಪರಿಸ್ಥಿತಿ ಎದುರಾಯಿತು.
ಈ ವಾರವಷ್ಟೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದ್ದು ಬಸ್, ಆಟೋ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಮತ್ತೆ ರಾಜ್ಯ ಸರ್ಕಾರ 36 ಗಂಟೆ ಲಾಕ್ಡೌನ್ ಘೋಷಿಸಿದ್ದು ಬಸ್ ಹಾಗೂ ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾದೆ. ಈ ಹಿನ್ನೆಲೆ ಜಿಲ್ಲೆಯ ಬಸ್ ನಿಲ್ದಾಣದಲ್ಲಿ ಆಟೋ ಸಿಗದೆ ಗರ್ಭಿಣಿಯು ಪರದಾಡುತ್ತಿರುವ ದೃಶ್ಯ ಮನಕಲಕುವಂತಿತ್ತು.
ಬೆಂಗಳೂರಿನಿಂದ ಬೆಳಿಗ್ಗೆ 8 ಗಂಟೆಗೆ ನಗರಕ್ಕೆ ಆಗಮಿಸಿರುವ ಮಹಿಳೆ, ಆಟೋ ಸಂಚಾರ ಇಲ್ಲದೆ ಮನೆಗೆ ತೆರಳಲಾಗದೆ ಪರದಾಡಬೇಕಾಯಿತು. ಸುಮಾರು 40 ನಿಮಿಷಗಳ ಕಾಲ ಬಸ್ ನಿಲ್ದಾಣದಲ್ಲಿ ಆಟೋಗಾಗಿ ಕಾದು ಕುಳಿತಿದ್ದ ಮಹಿಳೆ ಕೊನೆಗೆ ಪರಿಚಯಸ್ಥರಿಗೆ ಕರೆ ಮಾಡಿ ಬೈಕ್ ಮೇಲೆ ನಗರದ ಆರ್ಟಿಒ ಕ್ರಾಸ್ ಬಳಿ ಇರುವ ತಮ್ಮ ಮನೆಗೆ ತೆರಳಿದರು.