ಕಲಬುರಗಿ:ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳ ಬಳಿ ಕರೆತಂದ ಪೋಷಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟ ಘಟನೆ ನಗರದ ನೂತನ ವಿದ್ಯಾಲಯ ಪರೀಕ್ಷಾ ಕೇಂದ್ರದ ಬಳಿ ನಡೆದಿದೆ.
ಕಲಬುರಗಿ: ವಿದ್ಯಾರ್ಥಿಗಳ ಪೋಷಕರ ನಿಯಂತ್ರಿಸಲು ಪೊಲೀಸರ ಹರಸಾಹಸ - corona epidemic in Kalaburagi
ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕರೆದುಕೊಂಡು ಬಂದ ಪೋಷಕರು, ಅಲ್ಲಿಯೇ ಗುಂಪು ಗುಂಪಾಗಿ ಸೇರಿದ್ದರು. ಇದರಿಂದ ಗೊಂದಲದ ವಾತಾವರಣ ಉಂಟಾಯಿತು.
ಕಲಬುರಗಿ: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪೋಷಕರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕರೆದುಕೊಂಡು ಬಂದ ಪೋಷಕರು, ಅಲ್ಲಿಯೇ ಗುಂಪು ಗುಂಪಾಗಿ ಸೇರಿದ್ದರು. ಇದರಿಂದ ಗೊಂದಲದ ವಾತಾವರಣ ಉಂಟಾಯಿತು. ಪರೀಕ್ಷಾ ಕೇಂದ್ರ ಸುತ್ತಮುತ್ತಲಿನ 200 ಮೀಟರ್ ಅಂತರದಲ್ಲಿ 144 ನಿಷೇಧಾಜ್ಞೆ ಜಾರಿಯಿದ್ದರೂ ಸಹ ಪೋಷಕರು ತಲೆಕೆಡಿಸಿಕೊಳ್ಳದೆ ಅಲ್ಲಲ್ಲೇ ಗುಂಪು ಕಟ್ಟಿಕೊಂಡು ನಿಂತಿದ್ದರು. ಅವರನ್ನೆಲ್ಲಾ ಕೇಂದ್ರದ ಬಳಿಯಿಂದ ದೂರ ಹೋಗುವಂತೆ ಪೊಲೀಸರು ಮನವಿ ಮಾಡಿದರು. ಆದರೆ ಪೋಷಕರು ಕೇಳಲಿಲ್ಲ. ಈ ವೇಳೆ ಪೋಷಕರು ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.