ಕಲಬುರಗಿ:ಜಮೀನು ವಿವಾದ ಬಗೆಹರಿಸಿಕೊಳ್ಳೋಣ ಬಾ ಅಂತ ಕರೆಸಿ ಕೊಡಲಿಯಿಂದ ಕೊಚ್ಚಿ ವೃದ್ಧನ ಬರ್ಬರ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಫರತಾಬಾದ ಗರೂರು ಬಿ ಗ್ರಾಮದಲ್ಲಿ ನಡೆದಿದೆ.
ಗರೂರ ಬಿ ಗ್ರಾಮ ಹಾಗೂ ಸದ್ಯ ಕಲಬುರಗಿ ಸಮತಾ ಕಾಲೋನಿಯಲ್ಲಿ ವಾಸವಾಗಿದ್ದ ನಾಗಪ್ಪ 65 ಕೊಲೆಯಾದ ವೃದ್ಧ. ಕಳೆದ ಹಲವು ವರ್ಷಗಳಿಂದ ಸಂಬಂಧಿಕರ ಮಧ್ಯ ಜಮೀನು ವಿವಾದ ಸಾಗುತ್ತಲೇ ಬಂದಿತ್ತು. ನಿನ್ನೆ ಸಂಜೆ ಮಾತುಕತೆ ಮಾಡೋದಾಗಿ ಸಂಬಂಧಿಕರು ನಾಗಪ್ಪನನ್ನು ಜಮೀನಿಗೆ ಕರೆಸಿಕೊಂಡಿದ್ದರು. ಬಳಿಕ ಮಾತಿಗೆ ಮಾತು ಬೆಳೆದು ಐದಾರು ಜನ ಸೇರಿ ಕಟ್ಟಿಗೆ ಹಲ್ಲೆ ಮಾಡಿ ಬಳಿಕ ಕೂಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.