ಕಲಬುರಗಿ : ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಮಾತಿನ ಅರ್ಥವೇನು? ನಿಮಗೆ ಮಹಿಳೆಯರ ಬಗ್ಗೆ ಗೌರವ ಇಲ್ಲವೇ ಎಂದು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಲಂಚ ಮಂಚದ ಸರ್ಕಾರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು, ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಈ ರೀತಿಯ ಹೇಳಿಕೆಗಳು ಶೋಭೆ ತರುವುದಿಲ್ಲ. ಲಂಚದ ಬಗ್ಗೆ ಮಾತನಾಡುತ್ತಾರೆ ಸರಿ, ಆದರೆ ಮಂಚದ ಬಗ್ಗೆ ಮಾತನಾಡಿ ರಾಜ್ಯದ ಮಹಿಳೆಯರ ಗೌರವ ತೆಗೆಯುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಿಯಾಂಕ್ ಖರ್ಗೆ ಅವರೇ ನಿಮಗೆ ಮಹಿಳೆಯರ ಬಗ್ಗೆ ಗೌರವ ಇಲ್ಲವೇ.. ಶಾಸಕ ಪಾಟೀಲ್ ಪ್ರಶ್ನೆ ಮಾತಾಡಬೇಕಾದ್ರೆ ನಾಲಿಗೆ ಮೇಲೆ ಹಿಡಿತ ಇರಲಿ. ಮಂಚ ಹತ್ತಿ ನೌಕರಿಗೆ ಹೋಗಿರುವ ಒಂದೇ ಒಂದು ಉದಾಹರಣೆ ಕೊಡಲಿ. ಬಾಯಿಮಾತಿಗೆ ಏನೇನೋ ಮಾತನಾಡಿದರೆ ಸರಿ ಇರೋದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಪ್ರಿಯಾಂಕ್ ಖರ್ಗೆಯಿಂದ ಮಹಿಳೆಯರಿಗೆ ಅಗೌರವ :ಈ ಹೇಳಿಕೆ ನೀಡುವ ಮೂಲಕ ಪ್ರಿಯಾಂಕ್ ಖರ್ಗೆ ಮಹಿಳೆಯರಿಗೆ ಅಗೌರವ ತೋರಿದ್ದಾರೆ. ಈ ರೀತಿಯ ಹೇಳಿಕೆ ಕುಟುಂಬಗಳಲ್ಲಿ ಬಿರುಕು ಮೂಡಿಸುತ್ತವೆ. ಇಂತಹ ನೀಚ ಮಾತು ಹೇಳೋದು ಅವರಿಗೆ ಗೌರವ ತರಲ್ಲ. ಹೆಣ್ಣು ಮಕ್ಕಳನ್ನು ಗೌರವದಿಂದ ನೋಡಿ ಎಂದು ವಾಗ್ದಾಳಿ ನಡೆಸಿದರು.
ಪ್ರಿಯಾಂಕ್ ಖರ್ಗೆ ಅವರು, ಪ್ರಚಾರದ ಗೀಳಿಗಾಗಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಅವರು ಈ ಕೂಡಲೇ ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೇಳಬೇಕು. ಸರ್ಕಾರದ ಬಗ್ಗೆ ಮಾತಾಡಲು ಅವರ ಬಳಿ ಏನು ಉಳಿದಿಲ್ಲ. ಅದಕ್ಕಾಗಿ ಈ ರೀತಿ ಕೀಳು ಮಟ್ಟದ ಹೇಳಿಕೆ ಕೊಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ :ಹಿಂದುಳಿದ ಸಮುದಾಯದ ವಿಚಾರ ಬಂದಾಗ ನಾನು ಸಿದ್ದರಾಮಯ್ಯ ಒಂದೇ.. ಶ್ರೀರಾಮುಲು