ಕಲಬುರಗಿ:ಕಳ್ಳತನದಲ್ಲಿ ಭಾಗಿಯಾಗಿದ್ದ ಮೆಕ್ಯಾನಿಕ್ ಶೇಖ್ ಸಿದ್ದಿಕಿ ಎಂಬಾತನನ್ನು ಬಂಧಿಸುವಲ್ಲಿ ನಗರದ ಚೌಕ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೈಕ್ ಕದಿಯುತ್ತಿದ್ದ ಖದೀಮನ ಬಂಧನ - Kalaburgi police
ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದು ಕಳ್ಳತನದಲ್ಲಿ ಭಾಗಿಯಾಗಿದ್ದ ಶೇಖ್ ಸಿದ್ದಿಕಿ ಎಂಬಾತನನ್ನು ಬಂಧಿಸುವಲ್ಲಿ ನಗರದ ಚೌಕ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳು ಈತನ ಗೆಳೆಯ ಶೇಖ್ ಇಸ್ಮಾಯಿಲ್ನನ್ನು ಬಂಧಿಸಲಾಗಿತ್ತು.
ಮೆಕಾನಿಕ್ ಶೇಖ್ ಸಿದ್ದಿಕಿ ಬಂಧನ
ಉಮರ್ ಕಾಲೋನಿಯ ಮೆಕ್ಯಾನಿಕ್ ಶೇಖ್ ಸಿದ್ದಿಕಿ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 1.80 ಲಕ್ಷ ರೂಪಾಯಿ ಮೌಲ್ಯದ 4 ಸ್ಲೆಂಡರ್ ಬೈಕ್, ಒಂದು ಟಿವಿಎಸ್ ಹಾಗೂ ಒಂದು ಸುಪರ್ ಎಕ್ಸೆಲ್ ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ.
ಈತ ತನ್ನ ಸ್ನೇಹಿತನೊಂದಿಗೆ ಸೇರಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದ್ದು, ಈತನ ಸ್ನೇಹಿತ ಶೇಖ್ ಇಸ್ಮಾಯಿಲ್ನನ್ನು ಪೊಲೀಸರು ಕಳೆದ ತಿಂಗಳು ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಶೇಖ್ ಸಿದ್ದಿಕಿ ಪೊಲೀಸರಿಂದ ತೆಲೆಮರೆಸಿಕೊಂಡಿದ್ದ. ಸದ್ಯ ಚೌಕ್ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.