ಕರ್ನಾಟಕ

karnataka

ETV Bharat / state

ಪಿಎಸ್ಐ ಪರೀಕ್ಷೆ ಅಕ್ರಮ: ವಿಳಾಸ ಹೇಳಿದ ವ್ಯಕ್ತಿಯೇ ಕಿಡ್ನಾಪ್​, ರುದ್ರಗೌಡ ಆಪ್ತನ ವಿಚಾರಣೆ - Karnataka PSI examination scam

PSI recruitment exam scam.. ರುದ್ರಗೌಡನ ವಿಳಾಸ ನೀಡಿದ ಎನ್ನುವ ಕಾರಣಕ್ಕೆ ರುದ್ರಗೌಡ ಹಾಗೂ ಸಹಚರರು ಸೇರಿ ಇಲ್ಲಿನ ತಿಮ್ಮಾಪುರಿ ಸರ್ಕಲ್​ದಿಂದ ಉದ್ಯಮಿ ಬಸವರಾಜ್ ಬಿರಾದಾರ್ ಎಂಬುವರನ್ನು ಅಪಹರಣ ಮಾಡಿದ್ದರು. ಅಲ್ಲದೇ ಹಲ್ಲೆ ಮಾಡಿ ಗೋದಾಮ್​ವೊಂದರಲ್ಲಿ ಕೂಡಿಹಾಕಿ ಹಿಂಸೆ ನೀಡಿದ್ದರಂತೆ.

Karnataka PSI examination scam; Another person arrested
ರುದ್ರಗೌಡ ಪಾಟೀಲ್ ಸಹಚರ ಶಿವಪ್ಪ‌ ಆಲಮೇಲ್

By

Published : May 12, 2022, 5:07 PM IST

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‌ಪಿ‌ನ್ ರುದ್ರಗೌಡ ಪಾಟೀಲ್ ಸಹಚರ ಶಿವಪ್ಪ‌ ಆಲಮೇಲ್ ಎಂಬಾತನನ್ನು ವಶಕ್ಕೆ ಪಡೆದಿರುವ ಸಿಐಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪರೀಕ್ಷೆ ಅಕ್ರಮ ವಿಚಾರವಾಗಿ ವ್ಯಕ್ತಿಯೋರ್ವನನ್ನು ಕಿಡ್ನಾಪ್​ ಮಾಡಿ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ರುದ್ರಗೌಡನೊಂದಿಗೆ ಶಿವಪ್ಪ ಆಲಮೇಲ್ ಕೂಡಾ ಇದ್ದನೆಂಬ‌ ಮಾಹಿತಿ ಬೆಳಕಿಗೆ ಬಂದಿದೆ. ಈ ಆಧಾರದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಇಂದು ಈತನನ್ನು ವಿಚಾರಣೆಗೆ ಕರೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

ರುದ್ರಗೌಡ ಪಾಟೀಲ್ ಬಂಧನದ ನಂತರ ಶಿವಪ್ಪ ಆಲಮೇಲ್ ತಲೆಮರೆಸಿಕೊಂಡಿದ್ದ. ಪತ್ತೆಗಾಗಿ ಪೊಲೀಸರು ಹಲವು ದಿನಗಳಿಂದ ಶೋಧ ನಡೆಸುತ್ತಿದ್ದರು. ಇದೀಗ ಸಿಐಡಿ ಬಲೆಗೆ ಬಿದ್ದಿದ್ದು, ವಶಕ್ಕೆ ಪಡೆದು ಪರೀಕ್ಷೆ ಅಕ್ರಮದಲ್ಲಿ ಈತನ ಪಾತ್ರ ಏನು ಅನ್ನೋ ಕುರಿತಾಗಿ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ರುದ್ರಗೌಡ ಪಾಟೀಲ್ ಸಹಚರ ಶಿವಪ್ಪ‌ ಆಲಮೇಲ್

ಅಡ್ರೆಸ್ ಹೇಳಿದ ವ್ಯಕ್ತಿಯೇ ಕಿಡ್ನಾಪ್!: 2021ರ ಡಿಸೆಂಬರ್ ತಿಂಗಳಿನಲ್ಲಿ ನಡೆದ ಪಿಡಬ್ಲೂಡಿ ಜೆಇ ಪರೀಕ್ಷೆಯಲ್ಲಿ ಮಲ್ಲಾಬಾದ್ ಗ್ರಾಮದ ಅಭ್ಯರ್ಥಿ ಪರೀಕ್ಷೆ ಬರೆದು ಪಾಸಾಗಿದ್ದರು. ಆದರೆ, ಪರೀಕ್ಷೆಯಲ್ಲಿ ನಕಲು ಮಾಡಿ ಪಾಸಾಗಿದ್ದಾರೆ ಅಂತ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ರುದ್ರಗೌಡ ಪಾಟೀಲ್ ಹೆಸರು ಉಲ್ಲೇಖವಾಗಿತ್ತು.

ಈ ಪ್ರಕರಣ ಬೆನ್ನಟ್ಟಿದ ಪೊಲೀಸರು ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿದ್ದರು. ರುದ್ರಗೌಡನ ವಿಳಾಸ ನೀಡಿದ ಎನ್ನುವ ಕಾರಣಕ್ಕೆ ರುದ್ರಗೌಡ ಹಾಗೂ ಸಹಚರರು ಸೇರಿ ಇಲ್ಲಿನ ತಿಮ್ಮಾಪುರಿ ಸರ್ಕಲ್​ದಿಂದ ಉದ್ಯಮಿ ಬಸವರಾಜ್ ಬಿರಾದಾರ್ ಎಂಬುವರನ್ನು ಅಪಹರಣ ಮಾಡಿದ್ದರು. ಅಲ್ಲದೇ ಹಲ್ಲೆ ಮಾಡಿ ಗೋದಾಮ್​ವೊಂದರಲ್ಲಿ ಕೂಡಿಹಾಕಿ ಹಿಂಸೆ ನೀಡಿದ್ದರಂತೆ.

ಈ ಕುರಿತಾಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಅಪಹರಣ, ಕೊಲೆಯತ್ನ, ಮಾನಸಿಕ ಹಿಂಸೆ ಸೇರಿದಂತೆ ಇತರೆ ಐಪಿಸಿ ಕಲಂಗಳ ಅಡಿಯಲ್ಲಿ ದೂರು ದಾಖಲಾಗಿದೆ. ಆದರೆ, ಗಮನಾರ್ಹ ವಿಷಯ ಅಂದ್ರೆ ಪ್ರಕರಣ ದಾಖಲಾದ ನಂತರ ಮುಂದಿನ ಕ್ರಮಗಳು ಸಮರ್ಪಕವಾಗಿ ಜರುಗಿಸಿಲ್ಲ ಎನ್ನಲಾಗುತ್ತಿದೆ.

ABOUT THE AUTHOR

...view details