ಕಲಬುರಗಿ:ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆಗೈದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ರಾಠೋಡ ಜೊತೆಗಿದ್ದ ಆಪ್ತ ಸಹಾಯಕನಿಗೂ ಗಾಯಗಳಾಗಿದೆ. ಇಬ್ಬರನ್ನೂ ಕಲಬುರಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಚಿತ್ತಾಪುರ ತಾಲೂಕಿನ ಶಂಕರ್‌ವಾಡಿ ಬಳಿ ಘಟನೆ ನಡೆದಿದೆ. ಮಾಲಗತ್ತಿ ಬಳಿಯ ನ್ಯಾಷನಲ್ ಹೈವೆ ಸಮೀಪದ ತಮ್ಮ ಫಾರಂಹೌಸ್ನಿಂದ ತಡರಾತ್ರಿ ಕಲಬುರಗಿಗೆ ಬರುತ್ತಿದ್ದಾಗ ಮಾರ್ಗಮಧ್ಯೆ ಶಂಜರ್ ವಾಡಿ ಬಳಿ ದುಷ್ಕರ್ಮಿಗಳು ಮದ್ಯದ ಬಾಟಲಿ, ಕಲ್ಲು ತೂರಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಮಣಿಕಂಠ ಅವರ ತಲೆ, ಕಿವಿ, ಕೈಗಳಿಗೆ ಗಾಯಗಳಾಗಿವೆ. ಆಪ್ತಸಹಾಯಕ ಶ್ರೀಕಾಂತ್ ಸುಲೇಗಾಂವ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿದೆ.