ಕರ್ನಾಟಕ

karnataka

By

Published : Aug 25, 2019, 6:42 PM IST

ETV Bharat / state

ಹೆಚ್​​ಡಿಕೆ ಮಂಜೂರು ಮಾಡಿದ್ದ ಕಾಮಗಾರಿಗೆ ಬಿಎಸ್​ವೈ ತಡೆ: ಜೆಡಿಎಸ್​​​ ಮುಖಂಡರ ಆರೋಪ

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಂಜೂರು ಮಾಡಿದ್ದ ಕಾಮಾಗಾರಿಗೆ ಹಾಲಿ ಸಿಎಂ ಯಡಿಯೂರಪ್ಪ ತಡೆಯೊಡ್ಡುತ್ತಿದ್ದಾರೆ ಎಂದು ಕಲಬುರಗಿ ಜೆಡಿಎಸ್ ಮುಖಂಡರು ಆರೋಪ ಮಾಡಿದ್ದಾರೆ. ಯಡಿಯೂರಪ್ಪ ರಾಜಕೀಯ ಹಗೆತನ ಸಾಧಿಸಿ ಈ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ಟೆಂಡರ್ ಕರೆದು ಸ್ಥಗಿತಗೊಂಡ ಕೆಲಸ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಜೆಡಿಎಸ್ ಮುಖಂಡರಿಂದ ಆರೋಪ

ಕಲಬುರಗಿ:ಮಾಜಿ ಸಿಎಂ ಕುಮಾರಸ್ವಾಮಿ ಮಂಜೂರು ಮಾಡಿರುವ ಕಾಮಗಾರಿಗಳಿಗೆ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ತಡೆಯೊಡ್ಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಆರೋಪಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮೊಗನಟಗಾ ಹಾಗೂ ಅಫಜಲಪುರ ತಾಲೂಕಿನ ಗೂಳನೂರ ಗ್ರಾಮದ ನಡುವಿನ ಸೇತುವೆ ಮತ್ತು ಬ್ಯಾರೇಜ್ ಕಾಮಾಗಾರಿಗೆ 70 ಕೋಟಿ ರೂ. ಅನುದಾನದ ಬಿಡುಗಡೆ ಮಾಡಿದ್ದರು. ಮತ್ತು ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಹದಿನೈದು ದಿನದ ಹಿಂದೆ ಕಾಮಗಾರಿಗೆ ಮಂಜೂರಾತಿ ನೀಡಿದ್ದರು. ಆದರೆ ಹಾಲಿ‌ ಮುಖ್ಯಮಂತ್ರಿ ಯಡಿಯೂರಪ್ಪ ಈ ಕಾಮಗಾರಿಗೆ ತಡೆಯೊಡ್ಡಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಮುಖಂಡರಿಂದ ಆರೋಪ

ಯಡಿಯೂರಪ್ಪ ರಾಜಕೀಯ ಹಗೆತನ ಸಾಧಿಸಿ ಈ ಭಾಗದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ಟೆಂಡರ್ ಕರೆದು ಕೆಲಸ ಪ್ರಾರಂಭಿಸಬೇಕು. ಕಾಮಗಾರಿ ಮಂಜೂರಾತಿಗೆ ಸಹಕರಿಸಿದ ಸಮ್ಮಿಶ್ರ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ‌ ಮತ್ತು ಶಾಸಕರಾದ ಅಜಯ್‌ ಸಿಂಗ್, ಎಂ.ವೈ.ಪಾಟೀಲ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ABOUT THE AUTHOR

...view details