ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ ರೋಗಿಗಳು ಪರದಾಡುತ್ತಿರುವ ಘಟನೆ ನಡೆದಿದೆ.
ಕಲಬುರಗಿ: ಆಸ್ಪತ್ರೆಯಲ್ಲಿ ಸಿಗದ ಬೆಡ್ , ಆಟೋದಲ್ಲಿಯೇ ಕೃತಕ ಆಕ್ಸಿಜನ್ ಸಿಲಿಂಡರ್ ಇಟ್ಟುಕೊಂಡು ರೋಗಿಗಳ ಅಲೆದಾಟ - kalburgi latest news
ಇನ್ನೊಂದೆಡೆ ಬಿದ್ದಾಪುರ ಬಡಾವಣೆಯ 65 ವರ್ಷ ವಯಸ್ಸಿನವರು ಪಾಸಿಟಿವ್ ಬಂದ ಹಿನ್ನೆಲೆ ನಿನ್ನೆಯಿಂದ ನಗರದ ಹಲವು ಆಸ್ಪತ್ರೆಗೆ ಓಡಾಡಿದ್ದಾರೆ. ಅವರು ಸಹ ಬೆಡ್ ಸಿಗದೆ ನರಳಾಡಿದ್ದಾರೆ. ಸದ್ಯ ಕಲಬುರಗಿ ಜಿಮ್ಸ್ ಸೇರಿದಂತೆ ಸರ್ಕಾರಿ ಆಸ್ಪತ್ರೆಯಲ್ಲಿರುವ ಎಲ್ಲಾ ಐಸಿಯುಗಳ ಬೆಡ್ ಫುಲ್ ಆಗಿವೆ..
ಕಲಬುರಗಿ ಜಿಮ್ಸ್ ಆಸ್ಪತ್ರೆ ಮುಂದೆ ಐಸಿಯು ಬೆಡ್ಗಾಗಿ ರೋಗಿ ಪರದಾಟ ನಡೆಸಿದ್ದಾರೆ. ಆಟೋದಲ್ಲಿಯೇ ಕೃತಕ ಆಕ್ಸಿಜನ್ ಸಿಲಿಂಡರ್ ಹಾಕಿಕೊಂಡು ಮೂರ್ನಾಲ್ಕು ಗಂಟೆಯಿಂದ ಬೆಡ್ಗಾಗಿ ಅಸ್ಪತ್ರೆ ಮುಂದೆ ಪರದಾಟ ನಡೆಸಿದ್ದಾರೆ. ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಹೊಂದಿರೋ ರೋಗಿ ಆಸ್ಪತ್ರೆಗೆ ದಾಖಲಾಗಲೆಂದು ಆಟೋದಲ್ಲಿ ಹಲವು ಆಸ್ಪತ್ರೆಗೆ ಓಡಾಡಿದರೂ ಕೂಡ ಬೆಡ್ ಸಿಗದೆ ನರಳಾಡಿದ್ದಾರೆ.
ಇನ್ನೊಂದೆಡೆ ಬಿದ್ದಾಪುರ ಬಡಾವಣೆಯ 65 ವರ್ಷ ವಯಸ್ಸಿನವರು ಪಾಸಿಟಿವ್ ಬಂದ ಹಿನ್ನೆಲೆ ನಿನ್ನೆಯಿಂದ ನಗರದ ಹಲವು ಆಸ್ಪತ್ರೆಗೆ ಓಡಾಡಿದ್ದಾರೆ. ಅವರು ಸಹ ಬೆಡ್ ಸಿಗದೆ ನರಳಾಡಿದ್ದಾರೆ. ಸದ್ಯ ಕಲಬುರಗಿ ಜಿಮ್ಸ್ ಸೇರಿದಂತೆ ಸರ್ಕಾರಿ ಆಸ್ಪತ್ರೆಯಲ್ಲಿರುವ ಎಲ್ಲಾ ಐಸಿಯುಗಳ ಬೆಡ್ ಫುಲ್ ಆಗಿವೆ.