ಕಲಬುರಗಿ: ಜಿಲ್ಲೆಯಲ್ಲಿ ಸೋಮವಾರ ಹಲವೆಡೆ ಗುಡುಗು ಸಿಡಿಲು ಸಮೇತ ಉತ್ತಮ ಮಳೆ ಸುರಿದಿದೆ. ಸೇಡಂ ತಾಲೂಕಿನ ಗಂಗಾರಾವಲಪಲ್ಲಿಯಲ್ಲಿ ಭಾರಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿವೆ.
ಬಿರುಸಾದ ಮಳೆ: ಕಲಬುರಗಿಯಲ್ಲಿ ಸಿಡಿಲಿಗೆ 2 ಎತ್ತುಗಳು ಬಲಿ - etv bharat
ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಬಿರುಸಾಗಿ ಮಳೆ ಸುರಿಯಿತು. ಭಾರಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿವೆ.
ಭಾರಿ ಸಿಡಿಲಿಗೆ ಎರಡು ಎತ್ತುಗಳು ಬಲಿ
ಖಾಸೀಂ ಅಲಿ ಪಿಂಜಾರ್ ಎಂಬುವರಿಗೆ ಸೇರಿದ ಎತ್ತುಗಳು ಇವಾಗಿವೆ. ಅಂದಾಜು ಒಂದೂವರೆ ಲಕ್ಷ ರೂ. ಮೌಲ್ಯದ ಎತ್ತುಗಳು ಸಿಡಿಲಿಗೆ ಬಲಿಯಾಗಿದ್ದರಿಂದ ಖಾಸೀಂ ಅಲಿ ಪಿಂಜಾರ್ ಕಂಗಾಲಾಗಿದ್ದಾರೆ. ಎತ್ತುಗಳನ್ನು ಮರದ ಕೆಳಗೆ ಕಟ್ಟಿದ್ದಾಗ ಈ ದುರ್ಘಟನೆ ನಡೆದಿದೆ.