ಕಲಬುರಗಿ:ಮಹಿಳೆಯರನ್ನೆ ಟಾರ್ಗೆಟ್ ಮಾಡಿ ಕೊರಳಿಗೆ ಕೈಹಾಕಿ ಸರಗಳ್ಳತನ ಮಾಡುತ್ತಿದ್ದ ಕುಖ್ಯಾತ ಸರಗಳ್ಳರ ಬಂಧಿಸುವಲ್ಲಿ ನಗರದ ಚೌಕ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಖ್ಯಾತ ಸರಗಳ್ಳರ ಬಂಧನ..13.8 ಲಕ್ಷ ಮೌಲ್ಯದ ಚಿನ್ನಾಭರಣ ವಶ - ಕಲಬುರಗಿಯಲ್ಲಿ ನಾಲ್ವರು ಸರಗಳ್ಳರ ಬಂಧನ ಸುದ್ದಿ
ಕಲಬುರಗಿ ನಗರದ ಚೌಕ್ ಪೊಲೀಸರು ಜಿಲ್ಲೆಯ ಹಲವೆಡೆ ಸರಗಳ್ಳತನ ಮಾಡಿದ್ದ ಕುಖ್ಯಾತ ನಾಲ್ವರು ಸರಗಳ್ಳರನ್ನು ಬಂಧಿಸಿದ್ದಾರೆ.
ಕಲಬುರಗಿ ಪೊಲೀಸರಿಂದ ಕಲಬುರಗಿ ಪೊಲೀಸರಿಂದ ಸರಗಳ್ಳರ ಬಂಧನ
ಪ್ರಕರಣದ ಬೆನ್ನತ್ತಿದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಬಂಧಿತರಿಂದ 13.8 ಲಕ್ಷ ಮೌಲ್ಯದ 271 ಗ್ರಾಂ. ಚಿನ್ನಾಭರಣ ಮತ್ತು ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.