ಕರ್ನಾಟಕ

karnataka

ETV Bharat / state

ಅಕ್ರಮ ಪಡಿತರ ಅಂಗಡಿಗಳ ಮೇಲೆ ಆಹಾರ ಇಲಾಖೆ ದಾಳಿ

ಖಚಿತ ಮಾಹಿತಿ ಮೇರೆಗೆ ಪಡಿತರ ಅಕ್ಕಿ, ಬಿಸಿಯೂಟ ಯೋಜನೆಯ ಹಾಲಿನ ಪೌಡರ್, ಸಿರಿಧಾನ್ಯಗಳನ್ನು ಖರೀದಿಸಿ ದಾಸ್ತಾನು ಮಾಡಲಾಗಿದ್ದ ಅಂಗಡಿಗಳನ್ನು ಪೊಲೀಸರ ನೆರವಿನೊಂದಿಗೆ ಜಪ್ತಿ ಮಾಡಲಾಗಿದೆ.

Raid
Raid

By

Published : Apr 17, 2021, 6:36 PM IST

ಸೇಡಂ: ಪಟ್ಟಣದ ಅನೇಕ ಕಡೆಗಳಲ್ಲಿ ಅಕ್ರಮ ಪಡಿತರ ಖರೀದಿ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, 5 ಅಂಗಡಿಗಳನ್ನು ಜಪ್ತಿ ಮಾಡಿದ್ದಾರೆ.

ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದ ಬಳಿ ಎರಡು, ಲಾಲ್ ಬಹಾದ್ದೂರ ಗಂಜ್ನಲ್ಲಿ ಎರಡು, ಚಿಂಚೋಳಿ ಕ್ರಾಸ್ ಬಳಿ ಒಂದು ಹೀಗೆ ಒಟ್ಟು ಐದು ಅಂಗಡಿಗಳಿಗೆ ಬೀಗ್ ಜಡಿದಿದ್ದು, ತನಿಖೆ ಕೈಗೊಂಡಿದ್ದಾರೆ.

ಬೆಳಗ್ಗೆ ಆಹಾರ ಇಲಾಖೆಯ ಜಿಲ್ಲಾ ಅಧಿಕಾರಿಗಳ ತಂಡ ಹಾಗೂ ತಾಲೂಕು ಆಹಾರ ಶಿರಸ್ತೇದಾರ ಹೀರಾಸಿಂಗ್ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಪಡಿತರ ಅಕ್ಕಿ, ಬಿಸಿಯೂಟ ಯೋಜನೆಯ ಹಾಲಿನ ಪೌಡರ್, ಸಿರಿಧಾನ್ಯಗಳನ್ನು ಖರೀದಿಸಿ ದಾಸ್ತಾನು ಮಾಡಲಾಗಿದ್ದ ಅಂಗಡಿಗಳನ್ನು ಪೊಲೀಸರ ನೆರವಿನೊಂದಿಗೆ ಜಪ್ತಿ ಮಾಡಲಾಗಿದೆ.

ಹಲವಾರು ದಿನಗಳಿಂದ ಕೆಲ ಅಂಗಡಿಗಳು ಅನ್ನಭಾಗ್ಯ ಯೋಜನೆಯ ಪಡಿತರ ಖರೀದಿಸಿ, ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇತ್ತು. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಮತ್ತು ನಾವು ಜಂಟಿಯಾಗಿ ದಾಳಿ ನಡೆಸಿದ್ದು, ಅಕ್ರಮ ಪತ್ತೆ ಹಚ್ಚಲಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಶಿರಸ್ತೇದಾರ ಹಿರಾಸಿಂಗ ಚವ್ಹಾಣ್​ ಅವರು ತಿಳಿಸಿದ್ದಾರೆ.

ABOUT THE AUTHOR

...view details