ಕಲಬುರಗಿ : ಜಿಲ್ಲೆಯಲ್ಲಿ ಕೊರೊನಾದಿಂದ ವ್ಯಕ್ತಿ ಮೃತಪಟ್ಟ ಬಳಿಕ ಪ್ರಥಮ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಾಜೋಳ ಜಿಲ್ಲೆಗೆ ಆಗಮಿಸಿದ್ದು, ಈಗಿನ ಸ್ಥಿತಿಗತಿಗಳು ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕಲಬುರಗಿಯಲ್ಲಿ ಪರಿಸ್ಥಿತಿ ಅವಲೋಕನ ನಡೆಸಿದ ಗೋವಿಂದ ಕಾರಜೋಳ - ಗೋವಿಂದ ಕಾರಜೋಳ ಲೇಟೆಸ್ಟ್ ನ್ಯೂಸ್
ಇಂದು ಡಿಸಿಎಂ ಗೋವಿಂದ ಕಾರಾಜೋಳ ಜಿಲ್ಲೆಗೆ ಆಗಮಿಸಿದ್ದು, ಈಗಿನ ಸ್ಥಿತಿಗತಿಗಳು ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಆರಂಭಕ್ಕೂ ಮುನ್ನ ಕೆಲವರು ಸಚಿವರಿಗೆ ಮನವಿ ಪತ್ರಗಳನ್ನು ನೀಡಿದರು. ಈ ವೇಳೆ, ಇಎಸ್‌ಐಸಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ವೆಂಟಿಲೆಟರ್ ಕೊರತೆ ಬಗ್ಗೆ ಡಿಸಿಎಂ ಗೋವಿಂದ್ ಕಾರಜೋಳ ಗಮನಕ್ಕೆ ತರಲು ಮುಂದಾದ ರೈತ ಮುಖಂಡ ಮಾರುತಿ ಮಾನ್ಪಡೆ ಹಾಗೂ ಕಾರಜೋಳ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಸಹ ನಡೆಯಿತು.
ಕೋಪಗೊಂಡ ಸಚಿವರು ಮಾರುತಿ ಮಾನ್ಪಡೆ ಅವರನ್ನ ಸಭೆಯಿಂದ ಹೊರ ಕಳುಹಿಸಲು ಆದೇಶಿಸಿದರು. ಈ ವೇಳೆ, ಬಿಜೆಪಿಯವರು ಒಳಗೆ ಬಂದು ಮನವಿ ಕೊಟ್ಟರ ಸ್ವಿಕಾರ ಮಾಡುತ್ತೀರಾ, ನಾವೇನು ಮಾಡಿದ್ದೇವೆ ಎಂದು ಮಾನ್ಪಡೆ ಆಕ್ರೋಶ ವ್ಯಕ್ತ ಪಡಿಸಿದರು.