ಕಲಬುರಗಿ: ಬಸವಕಲ್ಯಾಣದ ಅನುಭವ ಮಂಟಪ ಮಾದರಿಯಲ್ಲಿ ಕಲಬುರಗಿಯಲ್ಲೂ ₹50 ಕೋಟಿ ವೆಚ್ಚದ ಅನುಭವ ಮಂಟಪ ನಿರ್ಮಿಸುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಕಲಬುರಗಿಯಲ್ಲೂ ಅನುಭವ ಮಂಟಪ: ಸಿಎಂ ಯಡಿಯೂರಪ್ಪ ಘೋಷಣೆ - Kalbarga news
ಕಲಬುರಗಿಯಲ್ಲೂ ₹50 ಕೋಟಿ ವೆಚ್ಚದಲ್ಲಿ ಬಸವಕಲ್ಯಾಣದ ಮಾದರಿಯಲ್ಲೇ ಅನುಭವ ಮಂಟಪ ನಿರ್ಮಿಸಿಕೊಡುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಮಠಾಧೀಶರ ಒಕ್ಕೂಟದಿಂದ ನಗರದ ಎಸ್ಎಂ ಪಂಡಿತ್ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಅನುಭವ ಮಂಟಪ ಸ್ಥಾಪಿಸುವಂತೆ ಮಠಾಧೀಶರು ಮನವಿ ಮಾಡಿದ್ದಾರೆ. ಈಗಾಗಲೇ ಸ್ಥಳ ಗುರುತಿಸಲಾಗಿದ್ದು, ಮಠಾಧೀಶರ ಆಸೆಯಂತೆ ಕಲಬುರಗಿಯಲ್ಲಿಯೂ ಸಹ ಬಸವಕಲ್ಯಾಣದ ಮಾದರಿಯಲ್ಲಿ ₹50 ಕೋಟಿ ರೂಪಾಯಿ ವೆಚ್ಚದಲ್ಲಿ ಶೀಘ್ರದಲ್ಲೇ ಬೃಹತ್ ಅನುಭವ ಮಂಟಪ ಸ್ಥಾಪಿಸುತ್ತೇವೆ ಎಂದರು.
ಸದ್ಯ 15 ದಿನಗಳೊಳಗೆ ₹20 ಕೋಟಿ ಅನುದಾನ ಬಿಡುಗಡೆ ಮಾಡಿ ಅನುಭವ ಮಂಟಪ ಕಾಮಗಾರಿ ಪ್ರಾರಂಭಿಸುವುದಾಗಿ ಸಿಎಂ ತಿಳಿಸಿದರು. ಈ ಭಾಗದಲ್ಲಿ ಪ್ರವಾಹದಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಸಿಎಂ ಪರಿಹಾರ ನಿಧಿಯಿಂದ ಒಂದು ಕೋಟಿ ಹಣ ಬಿಡುಗಡೆ ಮಾಡುವುದಾಗಿಯೂ ಈ ಸಂದರ್ಭದಲ್ಲಿ ಯಡಿಯೂರಪ್ಪ ಭರವಸೆ ನೀಡಿದರು.