ಕರ್ನಾಟಕ

karnataka

ETV Bharat / state

ಕಲಬುರಗಿ: ರಾತ್ರೋರಾತ್ರಿ ಜಮೀನಿಗೆ ನುಗ್ಗಿ ಕಡಲೆ ಬೆಳೆ ಕಳ್ಳತನಕ್ಕೆ ಯತ್ನ

ದುಷ್ಕರ್ಮಿಗಳು ರಾತ್ರಿಯ ವೇಳೆ ಕಡಲೆಕಾಯಿ ಕಟಾವು ಮಾಡಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಜಮೀನಿನ ಮಾಲೀಕ ಬರುತ್ತಿದ್ದಂತೆ ಕಟಾವು ಮಾಡಲು ತಂದಿದ್ದ ಯಂತ್ರೋಪಕರಣಗಳು, ಕೂಡಲಿ, ಟ್ರ್ಯಾಕ್ಟರ್‌‌ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

Attempted burglary overnight
ರಾತ್ರೋರಾತ್ರಿ ಕಡಲೆಕಾಯಿ ಕಟಾವಿಗೆ ಯತ್ನ

By

Published : Feb 14, 2022, 9:37 AM IST

ಕಲಬುರಗಿ: ದುಷ್ಕರ್ಮಿಗಳು ಜಮೀನಿಗೆ ನುಗ್ಗಿ ಕಡಲೆ ರಾಶಿಗೆ ಕನ್ನ ಹಾಕಿ ಕಳ್ಳತನಕ್ಕೆ ಮುಂದಾದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಲಗೊಂಡ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

ರೈತ ಸುಭಾಷ್ ಪಾಟೀಲ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕಡಲೆ ಬೆಳೆ ಕಳ್ಳತನ ಮಾಡಲು ಕಟಿಂಗ್ ಮಷಿನ್, ಟ್ರ್ಯಾಕ್ಟರ್‌ ತೆಗೆದುಕೊಂಡು ಬಂದಿದ್ದರು. ಇನ್ನೇನು ಕಡಲೆ ಕಟಾವು ಮಾಡಬೇಕು ಅನ್ನುವುದರೊಳಗೆ ಅಕ್ಕಪಕ್ಕದ ಜಮೀನಿನ ಜನರು ಸುಭಾಷ್ ಪಾಟೀಲ್‌ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು ಸ್ಥಳಕ್ಕೆ ಬರುವುದರಲ್ಲಿ ಅಕ್ರಮವಾಗಿ ಕಡಲೆ ಬೆಳೆ ಕಟಾವು ಮಾಡಲು ತಂದಿದ್ದ ಯಂತ್ರೋಪಕರಣಗಳನ್ನು ಸ್ಥಳದಲ್ಲೆ ಬಿಟ್ಟು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಇಆರ್‌ಎಸ್‌ಎಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಇಸ್ರೋದಿಂದ ವರ್ಷದ ಮೊದಲ ಉಡ್ಡಯನ ಯಶಸ್ವಿ: ಕಕ್ಷೆ ಸೇರಿದ 3 ಉಪಗ್ರಹಗಳು

For All Latest Updates

ABOUT THE AUTHOR

...view details