ಕಲಬುರಗಿ:ಇಂದು ನಡೆದ ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ’ಮೋದಿ ಮೋದಿ - ಖರ್ಗೆ ಖರ್ಗೆ’ ಎಂಬ ಜೈ ಘೋಷಗಳು ಬಲು ಜೋರಾಗಿಯೇ ಕೇಳಿಬಂದಿವೆ. ಕಾರ್ಯಕರ್ತರ ನಡುವೆ ಜೈಘೋಷ ಕೂಗಲು ಪೈಪೋಟಿಯೂ ನಡೆದಿದೆ.
ವಿಮಾನ ಲೋಕಾರ್ಪಣೆಗೆ ಬಂದಿದ್ದ ಸಿಎಂ ಬಿಎಸ್ ವೈ ಮುಂದೆ ಮಲ್ಲಿಕಾರ್ಜುನ ಖರ್ಗೆ ಪರ ಜಯಘೋಷ ಕೂಗಲಾಯಿತು. ಕಾಂಗ್ರೆಸ್ ಮುಖಂಡ ಎಮ್.ಎಲ್.ಸಿ ತಿಪ್ಪಣ್ಣಪ್ಪ ಕಮಕನೂರ್ ಹಿಂದೆ ಬರುತ್ತಿದ್ದ ಕಾಂಗ್ರೆಸ್ ಬೆಂಬಲಿಗರು, ಖರ್ಗೆ ಹಾಗೂ ಕಾಂಗ್ರೆಸ್ ಪರ ಜಯಘೋಷ ಕೂಗಿದರು. ಇದಕ್ಕೆ ತಲೆ ಕೆಡಿಸಿಕೊಳ್ಳದ ಬಿಎಸ್ವೈ ಹಾಗೂ ಸಚಿವರು ಮುಂದೆ ಸಾಗಿದರು. ಆದರೆ, ಇದರಿಂದ ಮುಜುಗರಕ್ಕೊಳಗಾದ ಬಿಜೆಪಿ ಸ್ಥಳೀಯ ಕಾರ್ಯಕರ್ತರು, ಬಿರುಸಿನ ಪೈಪೋಟಿ ನೀಡಿದರು. ಮೋದಿ ಮೋದಿ ಎನ್ನುತ್ತಾ ಬಿಜೆಪಿ ಪಕ್ಷದ ಪರವಾಗಿ ಜೈ ಘೋಷಗಳನ್ನು ಕೂಗಿದರು.