ಕರ್ನಾಟಕ

karnataka

ETV Bharat / state

ಆಟೋ ಚಾಲಕ ಜಮೀರ್ ಹತ್ಯೆ ಪ್ರಕರಣ.. ಇಬ್ಬರು ಆರೋಪಿಗಳ ಬಂಧನ - ಕೊಲೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಜಮೀರ್​ ಅಹ್ಮದ್​ ತಪ್ಪಿಸಿಕೊಂಡು ಓಡಿದರೂ ಬೆನ್ನು ಬಿಡದ ಹಂತಕರು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹತ್ತಾರು ಬಾರಿ ಕೊಚ್ಚಿ‌ ಕೊಲೆ ಮಾಡಿ ಪರಾರಿಯಾಗಿದ್ದರು.

Auto driver Jamir and accused Sameer Pasha
ಆಟೋ ಚಾಲಕ ಜಮೀರ್​ ಹಾಗೂ ಆರೋಪಿ ಸಮೀರ್​ ಪಾಶಾ

By

Published : Sep 20, 2022, 3:18 PM IST

ಕಲಬುರಗಿ: ಆಟೋ ಚಾಲಕ ಜಮೀರ್ ಅಹ್ಮದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಮೀರ್ ಪಾಶಾ (25) ಹಾಗೂ ಆಕಾಶ್ ಭಜಂತ್ರಿ (22) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಹೌಸಿಂಗ್ ಬೋರ್ಡ್ ಕಾಲೊನಿ‌ ನಿವಾಸಿ ಜಮೀರ್​ ಅಹ್ಮದ್​ ಆಟೋ ಚಾಲಕನಾಗಿದ್ದ, ಎಂದಿನಂತೆ ಭಾನುವಾರ ಸಂಜೆ ಆಟೋ ತಂದು ಹಳೇ ಜೇವರ್ಗಿ ರಸ್ತೆಯ ಶಹಬಾಜ್ ಕಾಲೊನಿ ಕ್ರಾಸ್ ಬಳಿ ನಿಂತಿದ್ದ, ಈ ವೇಳೆ ಹಂತಕರು ದಾಳಿ ನಡೆಸಿದ್ದರು. ತಪ್ಪಿಸಿಕೊಂಡು ಓಡಿದರೂ ಬೆನ್ನು ಬಿಡದ ಹಂತಕರು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹತ್ತಾರು ಬಾರಿ ಕೊಚ್ಚಿ‌ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹಣಕಾಸಿನ ವಿಚಾರಕ್ಕಾಗಿ ಕೊಲೆ ನಡೆದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ :ರಾಯಚೂರಿನ ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ; ವಿದ್ಯಾರ್ಥಿಯ ತಲೆಗೆ 12 ಹೊಲಿಗೆ!

ABOUT THE AUTHOR

...view details