ಕಲಬುರಗಿ: ಮಹಾಮಾರಿ ಕೊರೊನಾ ಸೋಂಕಿಗೆ ಜಿಲ್ಲೆಯ ಐವರು ಕೊನೆಯುಸಿರೆಳೆದಿದ್ದು ಮೃತರ ಸಂಖ್ಯೆ 122ಕ್ಕೆ ಏರಿಕೆಯಾಗಿದೆ. ಇದರಿಂದ ಜನರ ಆತಂಕ ಮತ್ತಷ್ಟು ಹೆಚ್ಚಿದೆ.
ಕಲಬುರಗಿಯಲ್ಲಿ ಕೊರೊನಾಗೆ ಐವರು ಬಲಿ....ಮೃತರ ಸಂಖ್ಯೆ 122ಕ್ಕೆ ಏರಿಕೆ - ಕಲಬುರಗಿ ಲೆಟೆಸ್ಟ್ ನ್ಯೂಸ್
ಮಹಾಮಾರಿ ಸೋಂಕಿಗೆ ತುತ್ತಾಗಿ 5 ಮಂದಿ ಮೃತಪಟ್ಟಿದ್ದು ಮೃತರ ಸಂಖ್ಯೆ 122ಕ್ಕೆ ಮತ್ತು ಸೋಂಕಿತರ ಸಂಖ್ಯೆ 6615ಕ್ಕೆ ತಲುಪಿದೆ. ಈ ಪೈಕಿ 4053 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
Kalaburagi corona case
50 ವರ್ಷದ ವ್ಯಕ್ತಿ, 55 ವರ್ಷದ ವ್ಯಕ್ತಿ, 59 ವರ್ಷದ ವ್ಯಕ್ತಿ, 68 ವರ್ಷದ ವೃದ್ಧೆ, 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಇಂದು 196 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 6615ರಷ್ಟಾಗಿದೆ. ಇನ್ನೂ 230 ಜನ ಡಿಸ್ಚಾರ್ಜ್ ಆಗಿದ್ದು, ಈವರೆಗೆ 4053 ಮಂದಿ ಕೊರೊನಾ ಗೆದ್ದು ಬಂದಿದ್ದಾರೆ. ಸದ್ಯ 2440 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.