ಹಾವೇರಿ: ಪ್ರಸ್ತುತ ದಿನಗಳಲ್ಲಿ ಮನುಷ್ಯರು ತೀರಿ ಹೋದರೆ ಶ್ರದ್ಧಾಂಜಲಿ ಸಲ್ಲಿಸುವುದ ಸಾಮಾನ್ಯ. ಆದರೆ ಇಲ್ಲಿ ಅಶ್ವಮೇಧ ಎಂಬ ಹೋರಿಗೆ ಹಮಾಲರ ಸಂಘ ಶ್ರದ್ಧಾಂಜಲಿ ಸಲ್ಲಿಸಿ ಪ್ರಾಣಿ ಪ್ರೀತಿ ತೋರಿದೆ.
ಹೋರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಹಮಾಲರ ಸಂಘ! - ಶ್ರದ್ಧಾಂಜಲಿ
ಹಾವೇರಿಯಲ್ಲಿ ಹಮಾಲರ ಸಂಘ ಹೋರಿಗೆ ಶ್ರದ್ಧಾಂಜಲಿ ಸಲ್ಲಿಸಿ ಪ್ರಾಣಿ ಪ್ರೀತಿ ತೋರಿದೆ.
ಜಿಲ್ಲೆಯಲ್ಲಿ ಕಳೆದ 11 ವರ್ಷಗಳಿಂದ ಅಶ್ವಮೇಧ ಎಂಬ ಹೋರಿ, ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ನೂರಾರು ಬಹುಮಾನಗಳನ್ನು ಪಡೆದಿತ್ತು. ಇದರಿಂದ ಈ ಹೋರಿಗೆ ಅಭಿಮಾನಿ ಸಂಘಗಳು ಹುಟ್ಟಿಕೊಂಡಿದ್ದವು. ಆದರೆ 11 ವರ್ಷ ರಾಜನಂತೆ ಮೆರೆದ ಅಶ್ವಮೇಧ ಕಳೆದ ಭಾನುವಾರ ಅಸುನೀಗಿತ್ತು. ಈ ಹಿನ್ನೆಲೆಯಲ್ಲಿ ಅದರ ಅಭಿಮಾನಿಗಳಾದ ಹಾವೇರಿ ಹಮಾಲರ ಸಂಘ ಅಶ್ವಮೇದ ಹೋರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಗರದ ಬಸವಣ್ಣ ದೇವಸ್ಥಾನದ ಮುಂದೆ ದೊಡ್ಡ ಕಟೌಟ್ ನಿಲ್ಲಿಸಿ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ಸಂಘ ವಿಶಿಷ್ಟವಾಗಿ ಶ್ರದ್ಧಾಂಜಲಿ ಸಲ್ಲಿಸಿತು. ಈ ಸಂದರ್ಭದಲ್ಲಿ ಹಮಾಲರ ಸಂಘದ ಸದಸ್ಯರು, ಬಸವೇಶ್ವರ ದೇವರ ಭಕ್ತರು ಇದ್ದರು.